Cnewstv.in / 17.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರದೆಲ್ಲೆಡೆ ರಾರಾಜಿಸುತ್ತಿರುವ ಫ್ಲೆಕ್ಸ್ ಗಳು. ಸಾರ್ವಜನಿಕರಿಗೆ, ವಾಹನ ಸವಾರರಿಗೆ ಕಿರಿಕಿರಿ..
ಶಿವಮೊಗ್ಗ : ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಗಿಡಮರ ಗಳಿಗಿಂತ ಹೆಚ್ಚಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್ ಗಳನ್ನೇ ಕಾಣಬಹುದು.. ನಗರದ ಕೆಲವು ಮುಖ್ಯ ರಸ್ತೆಗಳು ಹಾಗೂ ವೃತ್ತಗಳು ಫ್ಲೆಕ್ಸ್ ಗಳಿಂದಲೇ ತುಂಬಿಹೋಗಿದೆ.
ಅನಾಧಿಕೃತ ಫ್ಲೆಕ್ಸ್ ಅಳವಡಿಕೆ ಮಾಡಿರುವುದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅದರಲ್ಲೂ ನಗರದ ಮುಖ್ಯ ರಸ್ತೆಯಾದ ಕೋಟ್ ವೃತ್ತದಿಂದ ಡಿವಿಎಸ್ ಕಾಲೇಜಿಗೆ ಹೋಗುವ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಅನಾಧಿಕೃತವಾಗಿ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಕೆಲವು ಪ್ಲೆಕ್ಸಗಳು ರಸ್ತೆ ಮಧ್ಯದಲ್ಲಿ ಬಿದ್ದಿದ್ದು ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಇನ್ನು ನಗರದ ಕೆಲವು ಮುಖ್ಯ ರಸ್ತೆಗಳಲ್ಲಿ ಡಿವೈಡರ್ ಗಳಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್ ಗಳು ವಾಹನ ಸವಾರರ ಪ್ರಾಣಕ್ಕೆ ಕುತ್ತಾಗುತ್ತಿದೆ.
ಇನ್ನು ಇಲ್ಲಿ ಹಾಕಲಾಗಿರುವ ಎಲ್ಲಾ ಫ್ಲೆಕ್ಸ್ ಗಳಿಗೂ ಮಹಾನಗರ ಪಾಲಿಕೆಯಿಂದ ಅನುಮತಿ ಯನ್ನು ಪಡೆದಿದ್ದಾರ ಅಥವಾ ಅನಧಿಕೃತವಾಗಿ ಹಾಕಿದ್ದಾರಾ ?ಅನ್ನೋದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯ ಮೇಲೆ ಹಾಕುತ್ತಾ, ಹಾರಿಕೆಯ ಉತ್ತರವನ್ನು ನೀಡುತ್ತಾರೆ..
ಹಾಗಾದರೆ ಪ್ಲೆಕ್ಸ್ ಅಳವಡಿಕೆಗಾಗಿ ಇರುವಂತಹ ನಿಯಮಗಳನ್ನು ಗಾಳಿಗೆ ತೂರಲಾಗಿದ್ಯಾ ?? ಇದೆಲ್ಲಾ ಕಂಡರೂ ಕಾಣದಂತೆ ಅಧಿಕಾರಿಗಳು ಜಾಣ ಕುರುಡರಾಗಿದ್ದಾರಾ ಅನ್ನುವ ಪ್ರಶ್ನೆ ಜನರದ್ದು ??
ಒಟ್ಟಿನಲ್ಲಿ ಈ ಫ್ಲೆಕ್ಸ್ ಗಳು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ವಾಹನ ಸವಾರರಿಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಗಮನ ಹರಿಸಲಿ ಅನ್ನೋದೆ ನಮ್ಮ ಆಶಯ.
ಇದನ್ನು ಒದಿ : https://cnewstv.in/?p=9437
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments