Cnewstv.in / 16.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂತೋಷ್ ಪಾಟೀಲ್ ಪರವಾಗಿ ನಿಂತ ಜಿಲ್ಲಾ ವೀರಶೈವ – ಲಿಂಗಾಯತ ಸಮುದಾಯ..
ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇದೀಗ ಜಿಲ್ಲಾ ವೀರಶೈವ – ಲಿಂಗಾಯತ ಸಮುದಾಯದ ಮುಖಂಡರು ಸಂತೋಷ್ ಪಾಟೀಲ್ ಪರವಾಗಿ ನಿಂತಿದ್ದಾರೆ.
ನೆನ್ನೆ ವೀರಶೈವ ಸಮಾಜದ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಸಂತೋಷ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅತನ ಕುಟುಂಬಕ್ಕೆ ಸಮಾಜದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸುವ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಸಂತೋಷ್ ಪಾಟೀಲ್ ಗೆ ಶಿವಮೊಗ್ಗ ದಿಂದಲೇ ಅನ್ಯಾಯವಾಗಿದ್ದು ದೇಣಿಗೆ ಸಂಗ್ರಹ ಅಭಿಯಾನವನ್ನು ಶಿವಮೊಗ್ಗದಿಂದ ಆರಂಭ ಮಾಡುತ್ತಿದ್ದೇವೆ. ಇದು ಪಕ್ಷಾತೀತವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ಕೈಲಾದಷ್ಟು ದೇಣಿಗೆ ನೀಡುವಂತೆ ಮನವಿ ಮಾಡಿದರು. ಇದೇ ತಿಂಗಳು 23ರಂದು ವೀರಶೈವ – ಲಿಂಗಾಯತ ಸಮುದಾಯದ ವತಿಯಿಂದ ದೇಣಿಗೆ ಹಣವನ್ನು ಸಂತೋಷ ಕುಟುಂಬಕ್ಕೆ ತಲುಪಿಸಲಾಗುವುದು ಎಂದರು.
ಸರ್ಕಾರ ಈ ಕೂಡಲೇ ಬಾಕಿ ಇರುವ ಬಿಲ್ಲನ್ನ ಕ್ಲಿಯರ್ ಮಾಡಬೇಕು. ಸಂತೋಷ್ ರವರು ಮಾಡಿರುವ ಕಾಮಗಾರಿಗಳು ತಮ್ಮ ಮನೆ,ತೋಟಕ್ಕೆ ಸೇರಿರುವ ವೈಯಕ್ತಿಕ ಕಾಮಗಾರಿ ಅಲ್ಲ. ಸಾರ್ವಜನಿಕರಿಗೆ ಉಪಯೋಗವಾಗುವಂತಹ ರಸ್ತೆ ಕಾಮಗಾರಿ ಆಗಿದೆ. ಈ ಕಾಮಗಾರಿಗಾಗಿ ಸಂತೋಷ್ ರವರು ತಮ್ಮ ಕುಟುಂಬದ ಹಣವನ್ನ ಹಾಗೂ ಬಂಗಾರವನ್ನು ಅಡವಿಟ್ಟು ತಂದಿರುವ ಹಣ ಎಂಬ ಹೇಳಿಕೆಗಳನ್ನು ನೋಡಿದ್ದೇವೆ ಹಾಗಾಗಿ ಇರುವವರ ಮೇಲೆ ಸಾಲದ ಹೊರೆ ಬೀಳದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.
ಬಿ.ಎಸ್ ಯಡಿಯೂರಪ್ಪ ನವರಿಗೆ ವಿನಂತಿ…
ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕೆ ಅವರ ಪಕ್ಷ ಸಂಘಟನೆಗಿಂತ ವೀರಶೈವ ಸಮುದಾಯದ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರು. ಸಂತೋಷ್ ಪಾಟೀಲ್ ರವರು ನಮ್ಮ ಸಮುದಾಯದವರು ಹಾಗೂ ನಿಮ್ಮ ಪಕ್ಷದ ಕಾರ್ಯಕರ್ತ. ಹಾಗಾಗಿ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಬಾಕಿ ಇರುವ ಬಿಲ್ಲನ್ನ ಕ್ಲಿಯರ್ ಮಾಡಿಸಿಕೊಡಬೇಕೆಂದು ವಿನಂತಿಸಿದರು.
ಇದನ್ನು ಒದಿ : https://cnewstv.in/?p=9427
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments