Cnewstv.in / 11.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..ಜನವೋ ಜನ..
ಶಿವಮೊಗ್ಗ : ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ ಸಾಗರದ ಅನಂದಪುರದ ಚನ್ನಶೆಟ್ಟಿಕೊಪ್ಪದ, ಚನ್ನಮ್ಮಾಜಿ ಕೆರೆಯಲ್ಲಿ ನಡೆಯಿತು.
ಬೇಸಿಗೆ ಆರಂಭವಾಗಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಈ ಸಾಂಪ್ರದಾಯಿಕ ಮೀನು ಶಿಕಾರಿ ಆರಂಭವಾಗುತ್ತದೆ. ಕೆರೆಗಳಲ್ಲಿ ಮೀನುಗಳನ್ನು ಬೇಟೆಯಾಡಲು ಬೇಸಿಗೆ ಸಮಯದಲ್ಲಿ ದಿನವನ್ನು ನಿಗದಿ ಮಾಡುತ್ತಾರೆ. ಅಂದು ಗ್ರಾಮಸ್ಥರು ಮಂಕ್ರಿ, ಕುಣಿಯನ್ನು ಉಪಯೋಗಿಸಿ ಮೀನುಗಳನ್ನು ಹಿಡಿತಾರೆ.
ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದ ಈ ಕೆರೆಯಲ್ಲಿ ಮೀನು ಶಿಕಾರಿ ನಡೆದಿರಲಿಲ್ಲ. ಆದರೆ ಎರಡು ವರ್ಷದ ಹಿಂದೆಯೇ ಈ ಕೆರೆಯಲ್ಲಿ ಮೀನಿನ ಮರಿಗಳನ್ನ ಬಿಡಲಾಗಿತ್ತು. ಹಾಗಾಗಿ ಈ ಬಾರಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿಕಾರಿಗೆ ಆಗಮಿಸಿದ್ದರು.
ಚೆನ್ನಮ್ಮಾಜಿ ಕೆರೆಯಲ್ಲಿ ನಡೆದಂತಹ ಈ ಸಾಂಪ್ರದಾಯಿಕ ಮೀನು ಶಿಕಾರಿಯಲ್ಲಿ ಸುಮಾರು 1000 ದಿಂದ 1500 ಜನ ಭಾಗವಹಿಸಿದ್ದರು. ಆದರೆ ಅದನ್ನು ನೋಡಲು 5 ರಿಂದ 6 ಸಾವಿರಾರು ಜನ ಆಗಮಿಸಿದ್ದರು.
ಇದನ್ನು ಒದಿ : https://cnewstv.in/?p=9368
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments