Breaking News

ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ರಾಮನವಮಿ ಸಪ್ತಾಹ.

Cnewstv.in / 8.4.2022 / ಚಿಕ್ಕಮಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ರಾಮನವಮಿ ಸಪ್ತಾಹ.

ಚಿಕ್ಕಮಗಳೂರು : ಗೌರಿಗದ್ದೆ ಆಶ್ರಮದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಸಪ್ತಾಹವನ್ನು ಆಯೋಜನೆ ಮಾಡಲಾಗಿತ್ತು.

ರಾಮನವಮಿ ಸಪ್ತಾಹದ ಅಂಗವಾಗಿ ಗೌರಿಗದ್ದೆಯ ಶ್ರೀ ದತ್ತಾಶ್ರಮದಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮದ ಭಾಗವಾಗಿ ಏಳು ದಿನಗಳ ಕಾಲ ಒಂದೊಂದು ದಿನ ವಿಶೇಷ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ.

 

 

* ಬೆಳಗ್ಗೆ ಪ್ರಕೃತಿ ಪೂಜೆಯ ಭಾಗವಾಗಿ ಹಣ್ಣಿನ ಗಿಡ ಹಂಚುವುದು,
* ಕೌಸಲ್ಯಾ ಪೂಜೆ ಭಾಗವಾಗಿ ವೃದ್ದ ಮಹಿಳೆಯರಿಗೆ ಪಾದ ಪೂಜೆ ಮಾಡಿ ಸೀರೆ ಹಾಗೂ ಬಾಗಿನ ಕೊಡುವುದು.
* ಕನ್ನಿಕಾ ಪೂಜೆ ಭಾಗವಾಗಿ, ಪುಟ್ಟ ಹೆಣ್ಣು ಮಕ್ಕಳಿಗೆ ಬಟ್ಟೆ ಹಂಚಿ ಬಾಲ ಭೋಜನ ಹಾಖಿಸುವುದು.
* ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಮಂಗಳಮುಖಿಯರಿಗೆ ಪೂಜೆ ಮಾಡುವುದು,
* ಸೈನಿಕರಿಗೆ ಸನ್ಮಾನ ಮಾಡುವುದು ಹಾಗೂ ಪೌರ ಕಾರ್ಮಿಕರಿಗೆ ಆಹಾರದ ಕಿಟ್ ಕೊಡುವುದು‌ ಸೇರಿದೆ.
* ರಾಮನವಮಿ ದಿನ ಹಳ್ಳಿಗರಿಗೆ ಕಣ್ಣಿನ ಪರೀಕ್ಷೆಯ
ಕ್ಯಾಂಪ್ ಸಹ ಮಾಡಲಾಗುತ್ತದೆ.

ಇನ್ನು ಆಧ್ಯಾತ್ಮಿಕವಾಗಿ ರಾಮನ ತತ್ವವನ್ನು ಹಳ್ಳಿಗಳ ಮನೆ,ಮನೆ ಮುಟ್ಟಿಸಲು ಈ ರಾಮಾಯಣವನ್ನು ಕಲೆ ಮೂಲಕ ಪ್ರಸಾರಗೊಳಿಸುವುದು, ಮತ್ತು ಶಾಸ್ತ್ರೀಯವಾಗಿ ಏಳೂ ದಿನವೂ 10 ಸಾವಿರ ರಾಮಜಪ ಮತ್ತು ರಾಮತಾರಕ ಹೋಮವನ್ನು ಮಾಡಲಾಗುತ್ತದೆ. ರಾಮನವಮಿ ಅಂಗವಾಗಿ
ಏಳು ದಿನಗಳ ಕಾಲ ಯಕ್ಷಗಾನದ ಮೂಲಕ ರಾಮಾಯಣದ ಬಗ್ಗೆ ಮಾಹಿತಿ ನೀಡುವ ಮೂಲಕ ಕೊರೊನಾದಿಂದ ಆರ್ಥಿಕವಾಗಿ ನೆಲೆಕಳೆದುಕೊಂಡಿರುವ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

 

ಇದನ್ನು ಒದಿ : https://cnewstv.in/?p=9307

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*