Cnewstv.in / 7.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಸ್ಯ ಸಂಪನ್ಮೂಲ ಸಂರಕ್ಷಕಾ ಸಮುದಾಯ ಪ್ರಶಸ್ತಿಗೆ ಅರ್ಜಿ ಆಹ್ವಾನ.
ಶಿವಮೊಗ್ಗ : ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ-ಭಾರತ ಸರ್ಕಾರದಿಂದ 2020-21 ಮತ್ತು 2021-22ನೇ ಸಾಲಿಗೆ ಸಸ್ಯ ಸಂಪನ್ಮೂಲ ಸಂರಕ್ಷಣಾ ಸಮುದಾಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅತ್ಯುನ್ನತ ರೈತ ಮತ್ತು ರೈತ/ಬುಡಕಟ್ಟು ಸಮುದಾಯಗಳಿಗೆ ಕೊಡಮಾಡಲಾಗುವ ಈ ರಾಷ್ತೀಯ ಮಟ್ಟದ ಪ್ರಶಸ್ತಿಯನ್ನು ಪುರಾತನ ನಾಟಿ, ದೇಸಿ ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆಗಳನ್ನು ನೀಡಿದ ರೈತರನ್ನು ಗುರುತಿಸಿ ರಾಷ್ಟ್ರೀಯ ವಂಶವಾಹಿನಿ ನಿಧಿಯಿಂದ ಪ್ರತೀ ವರ್ಷ ನೀಡಿ ಪುರಸ್ಕರಿಸಲಾಗುತ್ತಿದೆ.
ಪ್ರಾಧಿಕಾರವು 2007 ರಿಂದ ಸಸ್ಯ ಸಂಪನ್ಮೂಲಗಳ ಸಂರಕ್ಷಕಾ ಸಮುದಾಯ ಪ್ರಶಸ್ತಿಯನ್ನು ನೀಡುತ್ತಿದ್ದು, ಇದು
ರೂ.10 ಲಕ್ಷ ರೂಪಾಯಿಗಳನ್ನೊಳಗೊಂಡ ಗರಿಷ್ಠ 5 ಪ್ರಶಸ್ತಿಗಳನ್ನು ಒಳಗೊಂಡಿದೆ. ಇದಲ್ಲದೆ 2012-13 ರಿಂದ ಸಸ್ಯತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ರೈತರನ್ನು ಗುರುತಿಸಿ ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿಯನ್ನು ತಲಾ ಒಂದೂವರೆ ಲಕ್ಷ ರೂಪಾಯಿಯಂತೆ ಗರಿಷ್ಠ 10 ರೈತರಿಗೆ ಮತ್ತು ಸಸ್ಯ ತಳಿ ಸಂರಕ್ಷಣಾ ರೈತ ಪುರಸ್ಕಾರವನ್ನು ತಲಾ ಒಂದು ಲಕ್ಷ ರೂಪಾಯಿಯಂತೆ ಗರಿಷ್ಠ 20 ರೈತರಿಗೆ ನೀಡಿ ಪುರಸ್ಕರಿಸುತ್ತಿದೆ.
ಆಸಕ್ತ ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ ಮತ್ತು ಹೊಸ ತಳಿ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರೈತ ಮತ್ತು ರೈತ/ಬುಡಕಟ್ಟು ಸಮುದಾಯಗಳು ದಿನಾಂಕ 27.06.2022 ರೊಳಗೆ ಉಪ ನೋಂದಣಾಧಿಕಾರಿಗಳ ಕಛೇರಿ, ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ, ವಿಭಾಗೀಯ ಕಛೇರಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ – 577204 ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ, ಡಾ. ಅಜಯ್ ಸಿಂಗ್, ಉಪನೋಂದಣಾಧಿಕಾರಿಗಳು ಮೊ. ಸಂಖ್ಯೆ 8876133357, ಜನಾರ್ಧನ ಬಟಾರಿ, ನೋಂದಣಿ ಸಹಾಯಕರು ಮೊ.ಸಂ 8722411091 ಇವರನ್ನು ಸಂಪರ್ಕಿಸಬಹುದು. ಅರ್ಜಿ ಮತ್ತು ಇತರೆ ಮಾಹಿತಿಯನ್ನು ವೆಬ್‍ಸೈಟ್ ವಿಳಾಸ: www.plantauthority.gov.in ಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನು ಒದಿ : https://cnewstv.in/?p=9294
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments