ಖ್ಯಾತ ರೇಡಿಯೋ ಜಾಕಿ ರಚನಾ ಇನ್ನಿಲ್ಲ..

Cnewstv.in / 22.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಖ್ಯಾತ ರೇಡಿಯೋ ಜಾಕಿ ರಚನಾ ಇನ್ನಿಲ್ಲ..

ಬೆಂಗಳೂರು : ಖ್ಯಾತ ರೇಡಿಯೋ ಜಾಕಿ ರಚನಾ (38) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಇದು ಬೆಳಿಗ್ಗೆ ಅವರ ಜೆಪಿನಗರದ ಪ್ಲಾಟ್ ನಲ್ಲಿ ರಚನಾಗೆ ಎದೆನೋವು ಕಾಣಿಸಿಕೊಂಡಿದೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ರಚನಾ ನಿಧನರಾಗಿದ್ದಾರೆ. ರಚನಾ ತಂದೆ-ತಾಯಿ ಚಾಮರಾಜಪೇಟೆಯ ವಾಸವಿದ್ದಾರೆ ಇಂದು ಸಂಜೆ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ.

ರೇಡಿಯೋ ಮಿರ್ಚಿ, ರೇಡಿಯೋ ಸಿಟಿಯಲ್ಲಿ ಹಲವಾರು ವರ್ಷಗಳಿಂದ ರೇಡಿಯೋ ಜಾಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ಮಾತಿನ ಮೂಲಕವೇ ಮನರ ಮನಸ್ಸನ್ನು ಗೆದ್ದಿದ್ದರು. ಕಳೆದ 7 ವರ್ಷಗಳಿಂದ ರೇಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಒಬ್ಬರು ಇದ್ದು, ಡಿಪ್ರೆಶನ್ ಸ್ಟ್ರೆಸ್ ನಿಂದ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

ಯಾವಾಗಲು ಡಯೆಟ್, ಫಿಟ್ನೆಸ್ ನ ಬಗ್ಗೆ ಗಮನ ಹರಿಸುತ್ತಿದ್ದ ರಚನಾ, ಕೆಲವು ತಿಂಗಳುಗಳಿಂದ ಡಿಪ್ರೆಶನ್ ನಲ್ಲಿದ್ದರು. ಸ್ನೇಹಿತರ ಕರೆಗೂ ಸ್ಪಂದಿಸುತ್ತಿರಲಿಲ್ಲ ಎಂಬ ಮಾಹಿತಿಯನ್ನು ಸ್ನೇಹಿತರು ಹಂಚಿಕೊಂಡಿದ್ದಾರೆ. ರಚನಾ ಅಗಲಿಕೆಗೆ ಸಾವಿರಾರು ಅಭಿಮಾನಿಗಳು ಸ್ನೇಹಿತರು, ಕಂಬನಿ ಮಿಡಿದಿದ್ದಾರೆ.

ಇದನ್ನು ಒದಿ : https://cnewstv.in/?p=8655

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*