Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸರ್ಕಾರ ಹಾಗೂ ಗುಪ್ತಚರ ಇಲಾಖೆ ವಿಫಲವಾಗಿದೆ : ಚಕ್ರವರ್ತಿ ಸೂಲಿಬೆಲೆ.
ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಇಂದು ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು, ಶಿವಮೊಗ್ಗ ಜಿಲ್ಲೆ ಅತ್ಯಂತ ಶಾಂತ ಪ್ರದೇಶ ಅಂತ ಹೇಳುತ್ತಾರೆ ಆದರೆ ಇದು ಯಾವತ್ತೂ ಶಾಂತವಾಗಿಲ್ಲ. ಈ ಹಿಂದೆಯೂ ಶಿವಮೊಗ್ಗದಲ್ಲಿ ನಾವು ಅನೇಕ ಹತ್ಯೆಗಳನ್ನು ನೋಡಿದ್ದೇವೆ. ಕೋಮುಗಲಭೆಗಳು ನಡೆಯುತ್ತಲೇ ಇರುತ್ತದೆ.
ಈ ಹಿಂದೆ ಪಿಎಫ್ಐ ರ್ಯಾಲಿ ಸಂದರ್ಭದಲ್ಲಿ ಸುಮ್ಮನೆ ಹೋಗೋಕೆ ಆಗದೆ ಗಾಜನೂರ್ ಹತ್ತಿರ ವಿಶ್ವನಾಥ್ ಅವರನ್ನು ಕೊಲೆ ಮಾಡಿ ಹೋಗಿದ್ದು ನಾವು ನೋಡಿದ್ದೇವೆ. ಎಲೆ ಅಕ್ಕಪಕ್ಕದಲ್ಲಿ ಅನೇಕ ಕೊಲೆಯಾಗಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಮೆರವಣಿಗೆ ಸಮಯದಲ್ಲಿ ಗಲಾಟೆ ನಡೆಯುತ್ತದೆ.
ಕೊಲೆ ನಡೆದ 24ಗಂಟೆಯೊಳಗೆ ಅಪರಾಧಿಗಳನ್ನು ಬಂಧಿಸಿದ್ದೇವೆ ಆದರೆ, ಶವಯಾತ್ರೆ ಸಂದರ್ಭದಲ್ಲಿ ಕಲ್ಲು ಎಸೆಯುತ್ತಾರೆ ಎಂದರೆ ಯಾರು ಕೊಲೆ ಮಾಡಿದ್ದಾರೇ ಅವರಿಗೆ ಸಮರ್ಥನೆ ಕೊಡುವ ಜನರು ಇನ್ನೂ ಇದ್ದಾರೆ ಎಂದು ಅರ್ಥ. ಇದು ಕೇವಲ ಇವತ್ತಿಗೆ ಮಾತ್ರ ಅಲ್ಲ ಇನ್ನು ಮುಂದಿನ ಹತ್ತು ವರ್ಷಗಳಿಗ ನಂತರವೂ ಸಮಸ್ಯೆಯನ್ನು ಹುಟ್ಟು ಹಾಕಬಲ್ಲದು.
ಸರ್ಕಾರ ಇಬ್ಬರನ್ನ, ಮೂವರನ್ನೂ ಬಂಧಿಸಿದ್ದೇವೆ ಎಂದು ಕಣ್ಣು ಹೊರೆಸುವ ಕೆಲಸ ಮಾಡುವುದರ ಬದಲಾಗಿ ಅದರ ಹಿಂದೆ ಇರುವಂತಹ ವ್ಯವಸ್ಥೆಯನ್ನು ಕಿತ್ತುಹಾಕಬೇಕು ಎಂದರು.
ಇದನ್ನು ಒದಿ : https://cnewstv.in/?p=8653
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments