Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೆ.ಎಸ್.ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೆರವಣಿಗೆಯಲ್ಲಿ ಆದ ನಷ್ಟವನ್ನು ಅವರೇ ಭರಿಸಬೇಕು : ಕೆ.ಬಿ.ಪ್ರಸನ್ನಕುಮಾರ್.
ಶಿವಮೊಗ್ಗ : ಜಿಲ್ಲೆಯ ಶಾಂತಿ ಜೊತೆಯಲ್ಲಿ ಆಟವಾಡುತ್ತಿರುವ ಬೇಜವಾಬ್ದಾರಿಗೆ ಮಂತ್ರಿ ಈಶ್ವರಪ್ಪನವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಕೆಬಿ ಪ್ರಸನ್ನ ಕುಮಾರ್ ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದಂತಹ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ಇದನ್ನು ನಾವೆಲ್ಲರೂ ಖಂಡಿಸುತ್ತೇವೆ. ಅಪರಾಧಿಗಳು ಯಾರಾಗಿದ್ದರು ಅವರ ಹಿಂದೆ ಯಾವುದೇ ರೀತಿಯಾದಂತಹ ಶಕ್ತಿ ಇದ್ದರೂ ಅವರನ್ನೆಲ್ಲಾ ಬಂಧಿಸಬೇಕು ಎಂದು ಆಗ್ರಹಿಸಿದರು.
ಇಡೀ ಕೃತ್ಯವನ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕು. ಎನ್ಐಎ ತನಿಖೆಗೆ ಆಗ್ರಹಿಸಿರುವುದು ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತವಾಗಬಾರದು. ಹರ್ಷನ ಕುಟುಂಬದವರ ಮಾತು ಕೇಳಿದರೆ ಕರುಳು ಕಿತ್ತು ಬರುತ್ತದೆ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡಬೇಕು
ಈಶ್ವರಪ್ಪನವರು ರಾಷ್ಟ್ರ ದ್ರೋಹಕ್ಕೆ ಸಮಾನವಾದ ಮಾತುಗಳನ್ನ ಮಾತನಾಡುತ್ತ, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕ್ಷೇತ್ರದ ನಾಗರಿಕರು ತಲೆತಗ್ಗಿಸುವಂತಹ ನಡವಳಿಕೆ ಖಂಡನಿಯ. ಇವರ ಜೊತೆಗಿರುವವರಿಗೆ ರಕ್ಷಣೆ ನೀಡಿಲ್ಲ ಅಂದರೆ ಶಿವಮೊಗ್ಗದ ನಾಗರಿಕರು ಯಾವ ರೀತಿಯಲ್ಲಿ ಧೈರ್ಯ ವಾಗಿರಬೇಕು ಎಂದು ಪ್ರಶ್ನಿಸಿದರು.
ನಿನ್ನೆ ಮೆರವಣಿಗೆ ಯಲ್ಲಿ ಕಲ್ಲುತೂರಾಟ ನಡೆಸಿದವರು ಯಾರು ನಮ್ಮ ಜಿಲ್ಲೆಯವರು ಅಲ್ಲ, ಅಂದ ಮೇಲೆ ಯಾಕೆ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಪ್ರಶ್ನಿಸಿದರು?? ನಿನ್ನೆಯ ಘಟನೆಗೆ ಈಶ್ವರಪ್ಪನವರೇ ನೇರ ಹೊಣೆ, ನೆನ್ನೆ ಆದಂತಹ ನಷ್ಟವನ್ನು ಈಶ್ವರಪ್ಪನವರೇ ಬರಿಸಬೇಕು ಎಂದರು.
ಇದನ್ನು ಒದಿ : https://cnewstv.in/?p=8642
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments