Cnewstv.in /16.02.2022 / ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಕಾಂಗ್ರೆಸ್ ಧರಣಿ : ಕಲಾಪ ನಾಳೆಗೆ ಮುಂದೂಡಿಕೆ.
ಬೆಂಗಳೂರು : ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಧರಣಿಗಿಳಿದ ಕಾಂಗ್ರೆಸ್ ಸದಸ್ಯರು, ವಿಧಾನಸಭೆ ಕಲಾಪವನ್ನು ನಾಳೆಗೆ ಮುಂದೂಡಿದ ಸಭಾಧ್ಯಕ್ಷ ಕಾಗೇರಿ.
ವಿಧಾನಮಂಡಲ ಅಧಿವೇಶನದ ವೇಳೆ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ನಾಯಕರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸದನವನ್ನು ಸಭಾಧ್ಯಕ್ಷರು ನಾಳೆಗೆ ಮುಂದೂಡಿದರು.
ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿ, ಸದನದ ಬಾವಿಗಿಳಿದಿ ಧರಣಿ ಮುಂದುವರೆಸಿದರು. ಜೊತೆಗೆ ರಾಷ್ಟ್ರಧ್ವಜವನ್ನ ಹಿಡಿದು ಧರಣಿನಡೆಸಲು ಮುಂದಾದ ಕಾಂಗ್ರೆಸ್ ಸದಸ್ಯರಿಗೆ ಸಭಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು,
ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ ಇದೆ. ಅದನ್ನು ಎತ್ತಿಹಿಡಿಯಲು ನಾವೆಲ್ಲ ಜವಾಬ್ದಾರರು ಆಗಿರಬೇಕು.
ರಾಷ್ಟ್ರ ಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿಕೊಳ್ಳುವುದು ಸರಿಯಲ್ಲ, ನಿಮ್ಮರಾಜಕೀಯ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ, ರಾಷ್ಟ್ರ ಧ್ವಜವನ್ನ ಈ ರೀತಿಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು, ರಾಷ್ರ್ಟಧ್ವಜವನ್ನ ಹಿಡಿದು ಈ ರೀತಿ ನಿಮ್ಮ ಸ್ವಾರ್ಥಕ್ಕೆ ರಾಷ್ಟ್ರಧ್ವಜ ಬಳಸುವುದು ಸರಿಯಲ್ಲ. ಅದು ನಿಮ್ಮ ಪಕ್ಷದ ಧ್ವಜ ಅಲ್ಲ. ಧರಣಿಗೆ ರಾಷ್ಟ್ರಧ್ವಜ ಬಳಸಬಾರದು. ಸದನದಲ್ಲಿ ಪ್ರತಿಭಟನೆಗೆ ರಾಷಧ್ವಜ ಬಳಸಿದ್ದು ಅಗೌರವ ಉಂಟಾಗಿದೆ. ಹೀಗಾಗಿ ನಿಲುವಳಿ ಸೂಚನೆಗೆ ತಿರಸ್ಕಾರ ಮಾಡಿದ್ದೇನೆ ಎಂದರು.
ಆಡಳಿತ-ವಿರೋಧ ಪಕ್ಷದ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿ, ತೋಳೇರಿಸಿದ ಪರಿಣಾಮ ಮಾರ್ಷಲ್ ಗಳು ಸ್ಥಳಕ್ಕೆ ಆಗಮಿಸಿ ಸದಸ್ಯರನ್ನು ನಿಯಂತ್ರಿಸಬೇಕಾಯಿತು. ಸದನವನ್ನು ಮುಂದೂಡಿದ ಬಳಿಕವೂ ಗದ್ದಲ ಕೆಲ ಸಮಯದ ಕಾಲ ಹಾಗೆಯೇ ಮುಂದುವರೆದಿತ್ತು.
ಇದನ್ನು ಒದಿ : https://cnewstv.in/?p=8469
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments