Cnewstv.in /15.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ದತ್ತು ಶಾಲೆಗೆ ವಿಶೇಷ ಕಾಯಕಲ್ಪ: ಸಿಗಂದೂರು ಕಾರ್ಯಕ್ಕೆ ನಟ ಕಿಚ್ಚ ಸುದೀಪ್ ಪ್ರಶಂಸೆ.
ಸಾಗರ : ನಾಡಿನ ಹೆಸರಾಂತ ಶ್ರೀ ಕ್ಷೇತ್ರ ಸಿಗಂದೂರಿನ ಆಡಳಿತ ಮಂಡಳಿಯ ಶೈಕ್ಷಣಿಕ ಕಾಳಜಿಯು ರಾಜ್ಯದಲ್ಲಿ ಯಾವ ದೇಗುಲಗಳು ಮಾಡದ ವಿನೂತನ ಕಾಳಜಿಯ ಕಾರ್ಯಕ್ರಮ “ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ” ಎಂಬ ವಿನೂತನ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುಧಿಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬ್ಯಾಕೋಡು ಬಳಿಯ ಹಾಳಸಸಿ ಸರ್ಕಾರಿ ಶಾಲೆಯನ್ನು ಕಳೆದ ಒಂದು ವರ್ಷದ ಹಿಂದೆ ಚಿತ್ರ ನಟ ಸುದೀಪ್ ದತ್ತು ತೆಗೆದುಕೊಂಡಿದ್ದರು. ಸದ್ಯ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದರು. ಸದ್ಯ ಸಿಗಂದೂರು ದೇವಸ್ಥಾನದ ವತಿಯಿಂದ ಈ ಸರ್ಕಾರಿ ಶಾಲೆಗಳಿಗೆ ವರ್ಣಲೇಪನ ಕಾರ್ಯ ನಡೆಯುತ್ತಿರುವ ಬಗ್ಗೆ ನಾಡಿನ ಸಮಸ್ತ ಶೈಕ್ಷಣಿಕ ಮನಸ್ಸುಗಳು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರ ನಟ ಸುದೀಪ್ ಸಿಗಂದೂರಿನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಜ್ಯದಲ್ಲಿ ಇಂತಹ ಶಿಕ್ಷಣ ಕ್ರಾಂತಿಗಳು ಹೆಚ್ಚು ಹೆಚ್ಚು ನಡೆಯಬೇಕು ಎಂಬ ಸಂದೇಶ ನೀಡಿದರು.
ಸಿಗಂದೂರಿನ ಧರ್ಮಾಧಿಕಾರಿಗಳಿಗೆ ಹಾಗೂ ಆಗಮಿಸಿದ ಶಿಕ್ಷಕರಿಗೆ ಕುವೆಂಪು ಸಮಗ್ರ ಸಾಹಿತ್ಯದ ಸಮಗ್ರ ಸಂಪುಟವನ್ನು ನೀಡಿ ಪ್ರಶಂಸಿಸಿ,ನಾನು ದತ್ತು ಪಡೆದ ಶಾಲೆಗೆ ಸುಂದರ ಶೈಕ್ಷಣಿಕ ತೋಟವಾಗಿ ಮಾಡಿದ ಸಿಗಂದೂರಿನ ಆಡಳಿತ ಮಂಡಳಿಗೆ ಹಾಗೂ ಸುಮಾರು 12ಊರುಗಳಿಂದ ಆಗಮಿಸಿ ಸುಣ್ಣ ಬಣ್ಣ ಕಾರ್ಯದಲ್ಲಿ ತೊಡಗಿದ ಪೋಷಕರಿಗೆ,ಹಿರಿಯ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ನನ್ನ ದತ್ತು ದತ್ತು ಶಾಲೆಯ ಸುಣ್ಣ ಬಣ್ಣ ಕಾರ್ಯದಲ್ಲಿ ತೊಡಗಿದ್ದಕ್ಕಾಗಿ ಧನ್ಯವಾದಗಳನ್ನು ದೂರವಾಣಿಯ ಮೂಲಕ ಅರ್ಪಿಸಿದರು.ಕಿಚ್ಚ ಸುದೀಪ್ ಚಾರಿಟೇಬಲ್ ಸೂಸೈಟಿಯ ಅಧ್ಯಕ್ಷರಾದ ಶ್ರೀ ರಮೇಶ್ ಕಿಟ್ಟಿ ಯವರು ಶಿಕ್ಷಕರು ಗಾಗಿ, ಕುವೆಂಪು ರವರ ಶೈಕ್ಷಣಿಕ ಪುಸ್ತಕಗಳನ್ನು ಕಳುಹಿಸಿದ್ದು ಈ ವೇಳೆ ಶಿಕ್ಷಕರಿಗೆ ನೀಡಲಾಯಿತು.
ಶರಾವತಿ ಹಿನ್ನೀರಿನ ಸರ್ಕಾರಿ ಶಾಲೆಗಳ ಸುಂದರಿಕರಣದತ್ತ ಮುಖ ಮಾಡಿರುವ ಶ್ರೀ ಕ್ಷೇತ್ರ ಸಿಗಂದೂರು ಈಗಾಗಲೇ 6 ಸರ್ಕಾರಿ ಶಾಲೆಗಳನ್ನು ಮುಗಿಸಿ 7ನೇ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಳಸಸಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಪೋಷಕರು ಭಾಗವಹಿಸಿ ತಾವೇ ಬ್ರೇಸ್ ಹಿಡಿದು ಶಾಲೆಯ ಸುಂದರೀಕರಣ ಮಾಡಲು ಸಿದ್ದರಾದ ದೃಶ್ಯ ಸಾಮಾನ್ಯವಾಗಿತ್ತು.
ವಿದ್ಯಾರ್ಥಿನಿಯರು. ಶಿಕ್ಷಕರು ಬಂದಿರುವ ಪೋಷಕರಿಗೆ ಬೆಳಗಿನ ಉಪಹಾರ, ಮದ್ಯಾಹ್ನದ ಭೋಜನಾ ಕಾರ್ಯದಲ್ಲಿ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಂಡಿದ್ದು ಕಂಡು ಬಂತು. ಪೋಷಕರು,ಹಿರಿಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಸುಣ್ಣ ಬಣ್ಣ ಮಾಡಲು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರತಿದಿನ ನೂರಕ್ಕೂ ಹೆಚ್ಚು ಪೋಷಕರು ಈ ಭಾಗದ
ಮೆತ್ತಲಗೋಡು,ಹಾಳಸಸಿ,ಕಾಸನಗದ್ದೆ,ಮಕ್ಕಿ,ಬರಗಲು,ಪಡಗೊಳ್ಳಿ,ಹೆಬ್ಬಳು,ದೀಟೆಕೊಪ್ಪ,ಹರಬ್ಬಿ,ತುಂಡಗಾರು,ಕಾನುಗೋಡು.ಆವಿಗೆ,ಚದಕೊಳ್ಳಿ,ಕೊಳೆಗೋಡು,ಹೊಸಗದ್ದೆ,ಹಾರೇಕೊಪ್ಪ ಬಾಳೆಕೇರಿಗಳಿಂದ ಆಗಮಿಸಿ ಈ ಸಿಗಂದೂರಿನ ಶೈಕ್ಷಣಿಕ ಕಾರ್ಯದಲ್ಲಿ ಕೈಜೋಡಿಸಿದರು.
ಜೈನ ಮುನಿ ಪಾಯ ಸಾಗರ ಮಾತನಾಡಿ ನಾನು ಓದಿದ 72 ಸಂವತ್ಸರ ಪೂರೈಸಿದ ನನ್ನ ಶಾಲೆಗೆ ಸುಣ್ಣ ಬಣ್ಣ ಮಾಡಿದ ಸಮಸ್ತ ನನ್ನ ಊರಿನ ಪೋಷಕರಿಗೆ,ಹಿರಿಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದರು
ಹಾಳಸಸಿಯಲ್ಲಿ ಜನಿಸಿ ಲೋಕ ಪರ್ಯಟನೆಯಲ್ಲಿ ಇರುವ ಶ್ರೀಗಳು ಕರ್ಮ,ಜನನ ಭೂಮಿ ಇದಾಗಿದ್ದು,ಶ್ರೀ ಕ್ಷೇತ್ರ ಸಿಗಂದೂರಿನ ಈ ಕಾರ್ಯಕ್ಕೆ ಧನ್ಯವಾದ ತಿಳಿಸಿದರು.
ಸಿಗಂದೂರು ಧರ್ಮಾಧಿಕಾರಿ ಡಾ. ರಾಮಪ್ಪನವರ ಹಾಗೂ ಕಾರ್ಯದರ್ಶಿ ರವಿಕುಮಾರ್ ಇವರ ಶೈಕ್ಷಣಿಕ ಸಾಮಾಜಿಕ ಕಾರ್ಯವು ಅತ್ಯಂತ ಉತ್ತಮವಾದ ಸಮಾಜಮುಖಿ ಚಿಂತನೆ ಮಕ್ಕಳ ಜ್ಞಾನ ದೇಗುಲವನ್ನು ಹಸಿರಾಗಿಡಲು ಈ ಪ್ರಯತ್ನ ನಾಡಿನುದ್ದಕ್ಕೂ ಪ್ರಶಂಸೆಗೆ ಕಾರಣವಾಗಿದೆ.
ಈ ಸಂಧರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪತಿ. ಗ್ರಾಮ ಪಂಚಾಯತಿ ಸದಸ್ಯ ಮೋಹನ್.ಶಿಕ್ಷರಾದ ಭೀಮಪ್ಪ , ಶ್ರೀ ಲೋಕೇಶಪ್ಪ, ರಾಜೇಶ್ವರಪ್ಪ, ದುಂಡಪ್ಪ ಇರಸೂರ,ಸಂತೋಷ ಸಿ ಆರ್ ಪಿ,ಭಾನುಪ್ರಕಾಶ ಸಿ ಆರ್ ಪಿ,ಚಂದ್ರಪ್ಪ ಅಳೂರು, ಆನಂದ ,ಮನು ಡಿ. ಇನ್ನಿತರರು ಇದ್ದರು.
ವರದಿ : ಸುಕುಮಾರ್ ಎಂ
ಇದನ್ನು ಒದಿ : https://cnewstv.in/?p=8459
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments