Cnewstv.in / 03.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆರ್ಥಿಕ ಹಿಂದುಳಿದ ವರ್ಗದ ವಿದ್ಯಾರ್ಥಿ ಗಳಿಗೆ ಶೇ 10ರಷ್ಟು ಮೀಸಲಾತಿಯಲ್ಲಿ ವೈದ್ಯಕೀಯ, ಸ್ನಾತಕೋತ್ತರ ಕೋರ್ಸ್ ಸೀಟ್ ಹಂಚಿಕೆ ಮಾಡಿ – ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ಆಗ್ರಹ.
ಶಿವಮೊಗ್ಗ : ವೈದ್ಯಕೀಯ , ಸ್ನಾತಕೋತ್ತರ ಸೀಟುಗಳ ಹಂಚಿಕೆಯಲ್ಲಿ ಈ ಬಾರಿಯೂ ‘ಆರ್ಥಿಕ ವಾಗಿ ಹಿಂದುಳಿದ ವರ್ಗ’ಗಳ (ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೆ ಶೇ.10ರಷ್ಟು ಮೀಸಲನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವುದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿರುವ ಕರ್ನಾಟಕ ಪ್ರತ್ಯೇಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ನೀಟ್ ಮತ್ತು ಯುಜಿ ನೀಟ್ ಬ್ಯಾಂಕ್ ವಿಜೇತ ಅಭ್ಯರ್ಥಿಗಳಿಗೆ ಕಾಲೇಜುಗಳ ಆಯ್ಕೆಗೆ ಕಾಲಾವಕಾಶ ಕಲ್ಪಿಸಿರುವ ಪರೀಕ್ಷಾ ಪ್ರಾಧಿಕಾರವು , ಆರ್ಥಿಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಕೋಟಾದ ಸೀಟುಗಳ ಆಯ್ಕೆಗೆ ಯಾವುದೇ ಅವಕಾಶ ನೀಡಿಲ್ಲ. ಇದರಿಂದಾಗಿ, ಹಲವು ತಿಂಗಳಿಂದ ಆರ್ಥಿಕ ಹಿಂದುಳಿದ ವರ್ಗಗಳ ಕೋಟಾ ಸೀಟುಗಳಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ನಿರಾಸೆ ಅನುಭವಿಸುವಂತಾಗಿದೆ*
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ 9,845 ವೈದ್ಯ ಮತ್ತು 4 ಸಾವಿರ ಸ್ನಾತಕೋತ್ತರ ವೈದ್ಯ ಸೀಟುಗಳನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿ ಕಾರ (ಎನ್‌ಟಿಇ) ನೀಡಿದೆ. ಇದರಲ್ಲಿ 980ಕ್ಕೂ ಹೆಚ್ಚು ವೈದ್ಯ ಹಾಗೂ 400 ಸ್ನಾತಕೋತ್ತರ ವೈದ್ಯ ಸೀಟುಗಳು ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ ದಕ್ಕಬೇಕಿತ್ತು . ಆದರೆ ಕೌನ್ಸೆಲಿಂಗ್ ವೇಳೆ ಅಗತ್ಯ ದಾಖಲೆ ಪ್ರಸ್ತುತಪಡಿಸಿದರೂ, ಸರಕಾರ ಮೀಸಲು ಜಾರಿ ಮಾಡದ ಕಾರಣ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲೇ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ*
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿಸೆಂಬರ್‌ನಿಂದಲೇ ವೈದ್ಯ ಪ್ರವೇಶಕ್ಕೆ ಅರ್ಹ ಪಿಜಿ ನೀಟ್ ಮತ್ತು ಯುಜಿ ನೀಟ್ ಬ್ಯಾಂಕ್ ವಿಜೇತ ಅಭ್ಯರ್ಥಿಗಳಿಂದ ಕೆಲ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆ ವೇಳೆ ಆದಾಯಮಿತಿ 8 ಲಕ್ಷ ಆದಾಯ ಮಿತಿ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ವಿದ್ದ ಕಾರಣ ಆರ್ಥಿಕ ಹಿಂದುಳಿದ ವರ್ಗದ ಕೋಟಾದ ಅಡಿಯಲ್ಲಿ ಸೀಟು ಬಯಸಿದ ಅಭ್ಯರ್ಥಿಗಳಿಗೆ, ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸುವಂತೆ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸರಕಾರದ ತೀರ್ಮಾನದಂತೆ ಸೀಟುಗಳನ್ನು ಆರ್ಥಿಕ ಹಿಂದುಳಿದ ವರ್ಗದಿಂದ ಪ್ರತಿನಿಧಿಸುವ ಮೀಸಲಿನಲ್ಲಿ ಹಂಚುವುದಾಗಿ ಹೇಳಿತ್ತು
ಜ.7ರಂದು ಮಧ್ಯಂತರ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ಮೀಸಲು ಕ್ರಮವನ್ನು ಎತ್ತಿ ಹಿಡಿಯಿತು. ಅಲ್ಲದೆ, ಆದಾಯ ಮಿತಿ ಸೇರಿದಂತೆ ಈ ಹಿಂದೆ ನಿಗದಿಪಡಿಸಿದ್ದ ಮಾರ್ಗಸೂಚಿಗಳ ಅನ್ವಯವೇ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡುವಂತೆ ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರ ಆರ್ಥಿಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಜಾರಿಮಾಡದೆ ಅನ್ಯಾಯ ಮಾಡಿದ್ದು ಈ ಕೂಡಲೇ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಪ್ರಕಟಿಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಬೇಕು ಎಂದು ಎಚ್ಚರಿಸುತ್ತದೆ.
ಇದನ್ನು ಒದಿ : https://cnewstv.in/?p=8176
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments