Cnewstv.in / 28.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನಕಲಿ ಪರವಾನಿಗೆಯಿಂದ ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಗೆ ಸಜೆ.
ಶಿವಮೊಗ್ಗ : ನಕಲಿ ಪರವಾನಿಗೆಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2ನೇ ಜೆಎಂಎಫ್‍ಸಿ ನ್ಯಾಯಾಲಯ ಒಟ್ಟು 03 ವರ್ಷ ಕಾರಾಗೃಹವಾಸ ಸಜೆ ಮತ್ತು ರೂ.15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ನಗರದ ದುರ್ಗಾಮೃತ ಲಾಡ್ಜ್ ನಂ.106 ರಲ್ಲಿ ಮುಂಭಾಗ ಅಲಿಯಾಸ್ ಎಂಬ ಆರೋಪಿಯು ಯಾವುದೇ ಪರವಾನಿಗೆ ಹೊಂದದೇ ನಕಲಿ ಪರವಾನಿಗೆಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ನಡೆಸುತ್ತಿದ್ದು, ಸಾಕ್ಷಿಗಳೊಂದಿಗೆ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿಗೆ ಬಳಸಿದ ಔಷಧಿಗಳು, ಬೋರ್ಡ್, ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಭಾರತ ದಂಡ ಸಂಹಿತೆಯ ಕಲಂ 465, 420 ರೀತ್ಯಾ ಆರೋಪವೆಸಗಿದ್ದಾನೆ ಎಂದು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವನ್ನು ಶಿವಮೊಗ್ಗ ಮಾನ್ಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿಗೆ ನ್ಯಾಯಾಧೀಶರಾದ ಎಸ್.ಆರ್.ಸನ್ಮತಿ ಇವರು ಐಪಿಸಿ ಕಲಂ 465 ಅಪರಾಧಕ್ಕೆ 1 ವರ್ಷ ಕಾರಾಗೃಹವಾಸ ಸಜೆ ಮತ್ತು ರೂ. 5 ಸಾವಿರ ದಂಡ ಹಾಗೂ ಕಲಂ 420 ಅಪರಾಧಕ್ಕೆ 02 ವರ್ಷಗಳ ಕಾರಾಗೃಹ ವಾಸ ಸಜೆ ಮತ್ತು ರೂ.10 ಸಾವಿರ ದಂಡ ವಿಧಿಸಿ ಜ.25 ರಂದು ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್‍ಕುಮಾರ್ ಪ್ರಕರಣದ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಲಾಗಿದೆ.
ಇದನ್ನು ಒದಿ : https://cnewstv.in/?p=8001
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments