Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಗೂಂಡಾಗಳ ಹಾಗೂ ಪುಂಡರ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಿ.
ಶಿವಮೊಗ್ಗ : ಮಂಜುನಾಥ ಬಡಾವಣೆಯ (ಅಣ್ಣಾ ನಗರ) ಸುತ್ತ ಮುತ್ತ ಅಹಿತರಕರ ಘಟನೆಗಳು, ಮುಸ್ಲಿಂ ಗೂಂಡಾಗಳ ಹಾಗೂ ಪುಂಡರ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮಂಜುನಾಥ ಬಡಾವಣೆ ನಿವಾಸಿಗಳು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿವೆ ಮನವಿ ಸಲ್ಲಿಸಿದರು.
ಮಂಜುನಾಥ ಬಡಾವಣೆ ಸುತ್ತ ಮುತ್ತಲು ಅಹಿತರಕರ ಘಟನೆಗಳು ಕಳೆದ 4-5 ತಿಂಗಳುಗಳಲ್ಲಿ ನಡೆಯುತ್ತಿದೆ. ಮಂಜುನಾಥ ಬಡಾವಣೆಯಲ್ಲಿನ ಶ್ರೀ ರಾಮಾಂಜನೇಯ ವೃತ್ತದಲ್ಲಿರುವ ನ್ಯೂ ಟೀ ಸ್ಟಾಲ್ ಅಂಗಡಿಯಲ್ಲಿ ಗುಂಪುಗಾರಿಕೆ ನೆಡೆಯುತ್ತಿದ್ದು ಇದರಿಂದ ಹೆಣ್ಣುಮಕ್ಕಳಿಗೆ ಚುಡಾಯಿಸುವುದು, ಗಾಂಜಾ ಸೇವನೆ ಮತ್ತು ಮಾರಾಟ ಮಾಡುವುದು ನೆಡೆಯುತ್ತಿದೆ. ಇದರಿಂದ ಸುತ್ತಮುತ್ತಲಿನ
ಹೆಣುಮಕ್ಕಳು ಹಾಗು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಈ ಟೀ ಸ್ಟಾಲ್ ಅನ್ನು ತೆರವುಗೊಳಿಸಬೇಕೆಂದು ಮನವಿಮಾಡಿದರು.
RML ನಗರದ ಕೃಷ್ಣ ರೈಸ್‌ಮಿಲ್ ಗಾಂಜಾ ಸೇವನೆಯ ಅಡ್ಡವಾಗಿದ್ದು ಆ ಸ್ಥಳಗಳಲ್ಲಿ ಹೆಚ್ಚಾಗಿ ಪೋಲೀಸ್ ಬೀಟ್ ಮಾಡುವಂತೆ ವಿನಂತಿಸಿದರು. ಕಿಣಿ ಲೇಔಟ್‌ನಲ್ಲಿರುವ ಶನೈಶ್ವರ ದೇವಾಲಯದ ಆವರಣದಲ್ಲಿ ಮುಸ್ಲಿಂ ಹುಡುಗರು ಗಾಂಜಾ ಸೇವನೆ ಮಾಡುವುದು ಹಾಗು ಅಲ್ಲಿನ ಅರ್ಚಕರಿಗೆ ತೊಂದರೆ ಕೊಡುವ ಕೃತ್ಯ ನಡೆಯುತ್ತಿದೆ.
2022 ನೇ ಜನವರಿ 26ರಂದು ಸಂಜೆ 6:30 ಕ್ಕೆ ಆನಂದ ರಾವ್ ಬಡಾವಣೆಯ ನಿವಾಸಿಗಳಾದ 4 ಜನ ವಿದ್ಯಾರ್ಥಿಗಳು ಟ್ಯೂಶನ್ ಮುಗಿಸಿಕೊಂಡು RML ನಗರದ ಕಿದ್ವಾಯಿ ಶಾಲೆಯ ಮುಂಬಾಗದಲ್ಲಿ ಹೊಗುತ್ತಿರುವಾಗ ಆ ವಿಧ್ಯಾರ್ಥಿಗಳ ಮೇಲೆ ಮುಸ್ಲಿಂ ಗೂಂಡಗಳಿಂದ ಮೊಬೈಲ್ ಹಾಗು ಹಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನು ವಿಚಾರಿಸಲು ಹೋದವಿದ್ಯಾರ್ಥಿಗಳ ಪೋಷಕರಮೇಲೂ ಸಹ ಮಾರಣಾಂತಿಕ ಹಲ್ಲೆ ನಡೆದಿದೆ.
ಕಳೆದ ವಾರ ಒಬ್ಬ ಕೂಲಿ ಕೆಲಸಗಾರ ಕೆಲಸ ಮುಗಿಸಿ ರಸ್ತೆಯಲ್ಲಿ ಅವನ ಸಂಪಾದನೆಯ ಹಣವನ್ನು ಎಣಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಆ ಹಣವನ್ನು ಮುಸ್ಲಿಂ ಗೂಂಡಗಳು ಕಸಿದುಕೊಂಡು ಓಡಿಹೋಗಿರುವ ಘಟನೆ ನಡೆದಿದೆ.
RML ನಗರ ಹಾಗೂ ಮಂಜುನಾಥ ಬಡಾವಣೆಯ ಸುತ್ತಮುತ್ತ ಮುಸ್ಲಿಂ ಗೂಂಡಾಗಳಿಂದ ಆನೇಕ ಅನೈತಿಕ ಚಟುವಟಿಕೆಗಳು ಹಾಗೂ ದುಷ್ಕೃತ್ಯಗಳು ನಡೆಯುತ್ತಿದೆ. ಇವರ ಪುಂಡಾಟ ಇನ್ನೂ ಹೆಚ್ಚಾಗಿದೆ. ಆದ್ದರಿಂದ ತಾವು ಸೂಕ್ಷ್ಮವಾಗಿ ಈ ಬಗ್ಗೆ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು,ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ ಪೋಲೀಸ್ ಬೀಟ್‌ಗಳನ್ನು ಹೆಚ್ಚಿಸಬೇಕೆಂದು ಪತ್ರದ ಮೂಲಕ ವಿನಂತಿಸಿದರು.
ಇದನ್ನು ಒದಿ : https://cnewstv.in/?p=7959
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments