Breaking News

ರಾಜ್ಯ ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿ ಇದೆಂತಹ ಪರಿಸ್ಥಿತಿ…!!

Cnewstv.in / 23.01.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜ್ಯ ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿ ಇದೆಂತಹ ಪರಿಸ್ಥಿತಿ…!!

ರಿಪ್ಪನ್‌ಪೇಟೆ: ಕೋಡೂರು ಮತ್ತು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ – ಗರ್ತಿಕರೆ ಸಂಪರ್ಕಿಸುವ ಸುಮಾರು 10 ಕಿ.ಮೀ.ಉದ್ದದ ಜಿಲ್ಲಾ ಮುಖ್ಯರಸ್ತೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ರೈತನಾಗರೀಕರು ಓಡಾಡದಂತಾಗಿದ್ದರೂ ಕೂಡಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರ ಕಣ್ಣಿಗೆ ಇನ್ನೂ ಬಿದ್ದಿಲ್ಲವೊ..! ಎಂಬ ಅನುಮಾನ ಇಲ್ಲಿನ ಜನರನ್ನು ಕಾಡುವಂತಾಗಿದೆ.

1995 ರಲ್ಲಿ ನಬಾರ್ಡ್ ಯೋಜನೆಯಡಿ ಡಾಂಬರೀಕರಣಗೊಂಡ ಶಾಂತಪುರ-ಗರ್ತಿಕೆರೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಹೊಂಡಗಳಿದೆಯೋ ಅಥವಾ ಹೊಂಡಗಳಲ್ಲಿ ರಸ್ತೆ ಇದೆಯೋ ಎಂಬಂತಾಗಿದ್ದು ಈ ರಸ್ತೆ ಅಭಿವೃದ್ದಿಗೆ ಸಚಿವರಲ್ಲಿ ಸಾಕಷ್ಟು ಭಾರಿ ಮನವಿಯನ್ನು ಸಲ್ಲಿಸಲಾದರೂ ಕೂಡಾ ಮನವಿ ಮನವಿಯಾಗಿಯೇ ಉಳಿದಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಪರ್ಕ ರಸ್ತೆಯು ಹುಂಚ – ಗರ್ತಿಕೆರೆ ಮಾರ್ಗವಾಗಿ ಕೋಡೂರಿಗೆ ಬಂದು ಅಲ್ಲಿಂದ ಹೊಸನಗರ, ಶಿವಮೊಗ್ಗ, ರಿಪ್ಪನ್‌ಪೇಟೆ, ಬೈಂದೂರು, ಕೊಲ್ಲೂರು, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರ ಮಾರ್ಗವಾಗಿ ತೆರಳುವರು ಹತ್ತಿರದ ಮಾರ್ಗವಾಗಿದ್ದು ಶಾಲಾ – ಕಾಲೇಜ್‌ಗಳಿಗೆ ಹೋಗುವ ವಿದ್ಯಾರ್ಥಿಗಳು ಈ ಹೊಂಡ ಗುಂಡಿಯಿಂದಾಗಿ ಸರ್ಕಾರ ಕೊಟ್ಟ ಸೈಕಲ್‌ಗಳಲ್ಲಿ ಸಹ ಹೋಗದ ಸ್ಥಿತಿ ನಿರ್ಮಾಣವಾಗಿದ್ದರೂ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕಣ್ಣಿದ್ದು ಕುರುಡರಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪವಾಗಿದೆ.

ಅಲ್ಲದೆ ಕಳೆದ ಐದಾರು ವರ್ಷದ ಹಿಂದೆ ಕರಿಗೆರಸು ಗ್ರಾಮ ಮಹಿಳೆಯೊಬ್ಬರು ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ರಸ್ತೆ ಹೊಂಡಕ್ಕೆ ಬಲಿಯಾದ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಇತ್ತೀಚೆಗೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಬ್ಬರು ಬಿದ್ದು ತಲೆಗೆ ಗಂಭೀರ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ. ಆದರೂ ಕ್ಷೇತ್ರದ ಶಾಸಕರು ಮತ್ತು ರಾಜ್ಯ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರರಿಗೆ ಮಾತ್ರ ಇನ್ನೂ ಗ್ರಾಮಗಳ ಮತದಾರರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆಂದು ಮತದಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮತದಾನದ ಬಹಿಷ್ಕಾರದಲ್ಲಿ ನೀಡಿದ ಭರವಸೆ ಏನು?

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಡೂರು-ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ – ಗರ್ತಿಕರೆ ಸಂಪರ್ಕಿಸುವ ಈ ಮಾರ್ಗದಲ್ಲಿನ ಹಲವು ಗ್ರಾಮಗಳ ಮತದಾರರು ಮತ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದಾಗ ಕೋಡೂರಿಗೆ ಚುನಾವಣಾ ಮತಯಾಚನೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಮತದಾರರಲ್ಲಿ ‘ನನ್ನ ಗೆಲುವಿಗೆ ಸಹಕರಿಸಿ ನಿಮ್ಮ ಬೇಡಿಕೆ ಈಡೇರಿಸುವೆ’ ಎಂಬ ಭರವಸೆ ನೀಡಿದ ಬೆನ್ನಲೇ ಮತದಾರರು ಚುನಾವಣಾ ಬಹಿಷ್ಕಾರ ನಿರ್ಧಾರವನ್ನು ಕೈಬಿಟ್ಟು ರಾಘವೇಂದ್ರ ರವರ ಗೆಲುವಿಗೆ ಸಹಕರಿಸಿದರು ಆದರೂ ಸಂಸದ ಭರವಸೆ ಭರವಸೆಯಾಗಿಯೇ ಉಳಿದಿದ್ದು ಮತದಾರನ್ನು ಇನ್ನೂ ಭೇಟಿಯಾಗದೆ ಕನಸಾಗಿಯೇ ಐದು ವರ್ಷ ಕಳೆದಿದೆ ಎಂದು ಮಾಧ್ಯಮದವರ ಮುಂದೆ ತಮ್ಮ ಅಂತರಾಳದ ನೋವನ್ನು ಹೊರಹಾಕಿದರು.

ಗುಜರಿ ಸೇರಿದ ಶಾಲಾ ಸೈಕಲ್‌ಗಳು :

ಸಮ್ಮಿಶ್ರ ಸರ್ಕಾರ ಜಾರಿಗೊಳಿಸಿದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಡಿ ನೀಡಲಾದ ಸೈಕಲ್‌ಗಳು ಈ ಅವ್ಯವಸ್ಥೆಯ ರಸ್ತೆಯಿಂದಾಗಿ ಶಾಲಾ ವಿದ್ಯಾರ್ಥಿಗಳ ಸೈಕಲ್ ಗುಜರಿ ಸೇರುವ ಮೂಲಕ ಕೆಲವು ಸೈಕಲ್‌ಗಳು ದನದ ಕೊಟ್ಟಿಗೆಯ ಅಟ್ಟ ಏರಿದ್ದು ಗರ್ತಿಕೆರೆ, ಹೊಸನಗರ, ಕೋಡೂರು, ರಿಪ್ಪನ್‌ಪೇಟೆ ಸೇರಿದಂತೆ ಇನ್ನಿತರ ಕಡೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೊರಕಲು ರಸ್ತೆಯಲ್ಲಿ 8-10 ಕಿ.ಮೀ. ನಡೆದೇ ಸಾಗುವ ಸ್ಥಿತಿ ನಿರ್ಮಾಣವಾಗಿದೆ.

ಅಪಘಾತಕ್ಕೀಡಾಗಿ ಹಲವರು ಆಸ್ಪತ್ರೆಗೆ ದಾಖಲು :

ಈ ಮೇಲ್ಕಂಡ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಈ ಕಾರಣದಿಂದಾಗಿ ರಾತ್ರಿ ವೇಳೆ ಕಾಡು ಪ್ರಾಣಿಗಳು, ಜಾನುವಾರುಗಳನ್ನು ಸೇರಿದಂತೆ ಹೊಂಡ-ಗುಂಡಿಗಳ ತಪ್ಪಿಸಲು ಹೋಗಿ ಹಲವರು ರಸ್ತೆ ಅಪಘಾತಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿ ಹಲವರು ಕೈ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ನರಳುವಂತಾಗಿದೆ.

ರಸ್ತೆ ದಾಟಿಸಲು ಕಂಬಳಿ ಜೋಲಿಯೇ ಗತಿ:

ಹದಗೆಟ್ಟ ರಸ್ತೆಯಿಂದಾಗಿ ಈ ಭಾಗದ ಹಲವು ಗ್ರಾಮಗಳಾದ ಕರಿಗೆರಸು, ಕುನ್ನೂರು, ಹಿಂಡ್ಲೆಮನೆ, ಹುಗುಡಿ, ಮಳಲಿಕೊಪ್ಪ, ಹಾರೆಕೊಪ್ಪ, ಹಾಲಂದೂರು ಹೀಗೆ ಹತ್ತು ಹಲವು ಗ್ರಾಮಗಳನ್ನು ಸಂಪರ್ಕಿಸುವ ಈ ಮುಖ್ಯರಸ್ತೆಗಳಲ್ಲಿ ತುರ್ತು ಅನಾರೋಗ್ಯ ಪೀಡಿತರನ್ನು ಗರ್ಭೀಣಿಯರಲ್ಲಿ ಹೆರಿಗೆ ನೋವು ಕಾಣಿಸಿಕೊಂಡರೆ ತಕ್ಷಣ 108 ಕ್ಕೆ ಕರೆ ಮಾಡಿದರೆ ಅವರು 10 ಕಿ.ಮೀ.ದೂರದ ಕೋಡೂರು ಅಥವಾ ಗರ್ತಿಕೆರೆ ಮುಖ್ಯರಸ್ತೆಗೆ ಕರೆದುಕೊಂಡು ಬನ್ನಿ ನಿಮ್ಮಊರಿನ ರಸ್ತೆಯಲ್ಲಿನ ಹೊಂಡ ಗುಂಡಿಯಿಂದಾಗಿ ವಾಹನ ಬರುಲು ಸಾಧ್ಯವಾಗುವುದಿಲ್ಲ ಎನ್ನುವ ಅಶರೀರವಾಣಿ ಕೇಳಿ ಬರುತ್ತದೆ. ಇದರಿಂದ ದಿಕ್ಕೆಟ್ಟ ಗ್ರಾಮಸ್ಥರು ಬೇರೆ ಉಪಾಯವಿಲ್ಲದೆ ಕಂಬಲಿಜೋಲಿ ಕಟ್ಟಿ ಹೊತ್ತು ಕರೆತರಬೇಕಾದ ಪ್ರಸಂಗಗಳು ಸಾಕಷ್ಟು ನಡೆದಿವೆ. ಆದರೂ ಈ ಭಾಗದ ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಕುರುಡರು, ಕಿವಿ ಇದ್ದು ಕಿವುಡರಂತಾಗಿದ್ದಾರೆ.

ಈ ರಸ್ತೆ ಅಭಿವೃದ್ದಿಗಾಗಿ ಸ್ಥಳೀಯ ಜನಪ್ರತಿನಿಧಿಗಳು ಶಾಸಕರಿಗೆ ಹಲವು ಭಾರಿ ಮನವಿ ಸಲ್ಲಿಸಿದಾಗಲು ಲೋಕೋಪಯೋಗಿ ಇಲಾಖೆಯಿಂದ ಸೂಚನೆ ಬಂದಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುದೆಂಬ ಉತ್ತರ ಹೇಳಿ ಹೋಗುತ್ತಾರೆ ಆದರೆ ಈವರೆಗೂ ಯಾರು ಬರಲ್ಲಿಲ್ಲ. ಹಾಗೂ ಇತ್ತೀಚಿಗೆ ನಡೆದ ಎಂ.ಎಲ್.ಸಿ. ಚುನಾವಣಾ ಪ್ರಚಾರಕ್ಕೆ ಕೋಡೂರಿಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರ ಬಳಿ ರಸ್ತೆ ವಿಚಾರದ ಬಗ್ಗೆ ಮನವಿ ಮಾಡಿದಾಗ ‘ಹಣ ಇಲ್ಲ ನಾನೇನು ಮಾಡಲಿ?’ ಎಂಬ ಬೇಜವಾಬ್ದಾರಿ ಎಂದು ಉತ್ತರ ನೀಡಿದರು ಎಂದು ನೊಂದ ಗ್ರಾಮಸ್ಥರು ಮಾಧ್ಯಮದವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಇನ್ನಾದರು ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಗೃಹಮಂತ್ರಿಗಳಾದ ಆರಗ ಜ್ಞಾನೇಂದ್ರ ರವರು ಇತ್ತ ಗಮನ ಹರಿಸುತ್ತಾರ ಕಾದು ನೋಡಬೇಕಾಗಿದೆ.

ವರದಿ : ಮಹೇಶ್, ರಿಪ್ಪನ್‌ಪೇಟೆ.

ಇದನ್ನು ಒದಿ : https://cnewstv.in/?p=7859

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments