Cnewstv.in / 22.01.2022/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಎಲ್ ಬಿಎಸ್ ನಗರ ಕೀರ್ತಿನಗರ ಮತ್ತು ಅಶ್ವಥ್ ನಗರದಲ್ಲಿ ಉಂಟಾಗಿರುವ ಸಂಚಾರಿ ಸಮಸ್ಯೆ ಪರಿಹರಿಸಲು ಆಗ್ರಹಿಸಿ.
ಶಿವಮೊಗ್ಗ ನಗರದ ಮುಖ್ಯರಸ್ತೆಯ ಸಮೀಪವಿರುವ ರೈಲ್ವೆಗೇಟ್ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿಯಿಂದ ಸಂಚಾರ ವ್ಯವಸ್ಥೆ ಬದಲಿ ಮಾರ್ಗ ಕಲ್ಪಿಸಿದ್ದು ಇದರಿಂದ ಎಲ್ ಬಿಎಸ್ ನಗರ ,ಕೀರ್ತಿ ನಗರ ಮತ್ತು ಅಶ್ವಥ್ ನಗರದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಶೀಘ್ರವೇ ಪರಿ ಹರಿಸಲು ಒತ್ತಾಯ.
ಶಿವಮೊಗ್ಗ ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಮ್ ಸಮೀಪದ ರೈಲ್ವೆ ಗೇಟನ್ನು ಕಾಮಗಾರಿ ಪ್ರಯುಕ್ತ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ ಪರ್ಯಾಯವಾಗಿ ಎಲ್ ಬಿಎಸ್ ನಗರ ಮಾರ್ಗ ಬಳಸಲು ಜಿಲ್ಲಾಡಳಿತ ಸೂಚಿಸಿದೆ.ಆದರೆ ಎಲ್ ಬಿಎಸ್ ನಗರ ಕೀರ್ತಿನಗರದ ಮತ್ತು ಅಶ್ವತ್ಥ್ ನಗರವು ಜನವಸತಿ ಪ್ರದೇಶವಾಗಿದ್ದು ಈ ಬಡಾವಣೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚಾರ ನಡೆಸುತ್ತಿರುವುದರಿಂದ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ.
ಶಿವಮೊಗ್ಗ ಜಿಲ್ಲಾಡಳಿತ ಸೂಚಿಸಿರುವ ಎಲ್ ಬಿಎಸ್ ನಗರದ ಕೀರ್ತಿ ನಗರ ಮತ್ತು ಅಶ್ವತ್ಥ್ ನಗರ ಮಾರ್ಗದಲ್ಲಿ ದ್ವಿಚಕ್ರ ಹಾಗೂ ಸಣ್ಣ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು .ಲಾರಿ ಬಸ್ಸು ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ಎಲ್ಬಿಎಸ್ ಮಾರ್ಗದಲ್ಲಿ ನಿಷೇಧಿಸಬೇಕು ಭಾರಿ ಗಾತ್ರದ ವಾಹನಗಳಿಗೆ ಪರ್ಯಾಯ ಮಾರ್ಗ ವ್ಯವಸ್ಥೆಯನ್ನು ಜಿಲ್ಲಾಡಳಿತ ಸೂಚಿಸಬೇಕು.
ಎಲ್ವಿಸ್ ಬಡಾವಣೆ ಕೀರ್ತಿನಗರ ಮತ್ತು ಅಶ್ವತ್ಥ್ ನಗರ ಮಹಿಳೆಯರು ಮಕ್ಕಳು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು ಭಾರಿ ಗಾತ್ರದ ವಾಹನಗಳ ಸಂಚಾರದಿಂದ ಜನರ ಜೀವಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಎಲ್ ಬಿಎಸ್ ನಗರ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ನೂರಾರು ನಿವಾಸಿಗಳು ಹಾಗೂ ಮಹಿಳೆಯರು ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಚೇತನ್ ಕೆ ,ರಂಗಪ್ಪ ,ರೇಖಾ ದಿನೇಶ ,ಉಷಾ ವಿಶ್ವನಾಥ್ ,ಸವಿತಾ ,ಗೌತಮ್ ಹಾಗೂ ನೂರಾರು ನಿವಾಸಿಗಳು ಪಾಲ್ಗೊಂಡಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಒದಿ : https://cnewstv.in/?p=7817
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments