Cnewstv.in / 09.01.2022 / ರಾಮನಗರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗಾರಿ ಬಾರಿಸುವ ಮೂಲಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ
ರಾಮನಗರ : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಇಂದು ಕನಕಪುರ ತಾಲೂಕಿನ ಸಂಗಮ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ವಿಕೆಂಡ್ ಕರ್ಫ್ಯೂ ಮಧ್ಯೆ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ನಗಾರಿ ಬಾರಿಸುವ ಮೂಲಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾಧುಕೋಕಿಲ, ದುನಿಯ ವಿಜಯ್, ಸೇರಿದಂತೆ ಅನೇಕ ಕಾಂಗ್ರೆಸ್ ನಾ ಘಟಾನುಘಟಿ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕೊರೊನಾ ಟಫ್ ರೂಲ್ಸ್ ನಡುವೆಯೂ ಸಹ 19 ದಿನಗಳ ಕಾಲ ಕಾಂಗ್ರೆಸ್ಸ್ ಪಾದಯಾತ್ರೆಯನ್ನು ನಡೆಸಲಿದೆ. ಪಾದಯಾತ್ರೆಯನ್ನು ರೈತ ಗೀತೆಯೊಂದಿಗೆ ಆರಂಭಿಸಿದ್ದು ಎಲ್ಲರೂ ಹಸಿರು ಶಾಲನ್ನು ತೊಟ್ಟಿದ್ದರು.
ಕಾಂಗ್ರೆಸ್ ನಾಯಕರು ಮೊದಲ ದಿನ 15 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಪಾದಯಾತ್ರೆ ನಡೆಯಲಿದೆ.
ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗಿದರು.
ಇದನ್ನು ಒದಿ : https://cnewstv.in/?p=7443
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments