Cnewstv.in / 06.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸ್ಮಾರ್ಟ್ ಸಿಟಿ ನೀರಿನ ಬಿಲ್ ನೋಡಿ ಜನರೇ ಕಂಗಾಲು.
ನೀರು ಬಿಟ್ಟು ಬೇರೆ ಏನಾದ್ರೂ ಪೂರೈಕೆ ಮಾಡಿದ್ರಾ ಅಧಿಕಾರಿಗಳು.. ?
ಶಿವಮೊಗ್ಗ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾದಾಗಿನಿಂದಲೂ ಶಿವಮೊಗ್ಗ ನಗರದ ಜನರು ಸಮಸ್ಯೆಗಳ ಸುಳಿಯಲ್ಲೇ ಸಿಲುಕಿ ಒದ್ದಾಡುತ್ತಿದ್ದಾರೆ. ಇಷ್ಟು ದಿನ ರಸ್ತೆಯ ಗುಂಡಿ, ಧೂಳಿನ ಕಿರಿಕಿರಿ ಅನಭವಿಸುತ್ತಿದ್ದ ಜನರಿಗೆ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದ್ದು, ಇದರಿಂದ ಜನರೇ ಕಂಗಲಾಗಿ ಹೋಗಿದ್ದಾರೆ.
ಹೌದು, ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥಿತ ಪೂರೈಕೆಗೆ ಸಂಬಂಧಿಸಿದಂತೆ 24/7 ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆದರೆ, ಆ ಕುಡಿಯುವ ನೀರಿನ ಬಿಲ್ ನೋಡಿ ಜನರೇ ಬೆಚ್ಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ನಗರ ನೀರು ಸರಬರಾಜು ಮಂಡಳಿಯು ನಗರದ ಕೆಲವು ಬಡಾವಣೆಗಳಲ್ಲಿ ಹಳೆಯ ಪೈಪ್ ಲೈನ್ ತೆಗೆದು, ಹೊಸ ಲೈನ್ ಮಾರ್ಗವನ್ನು ಅಳವಡಿಸಿ ನೀರಿನ ಸಂಪರ್ಕವನ್ನು ಕಲ್ಪಿಸಿದೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಗೋಪಾಲ ಗೌಡ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಪ್ರಯೋಗಿಕವಾಗಿ ಸಂಪರ್ಕವನ್ನು ಕಲ್ಪಿಸಿದ್ದು, ಜನರಿಗೆ ತಿಂಗಳಾಂತ್ಯಕ್ಕೆ ಬಿಲ್ ಸಹ ನೀಡಲಾಗುತ್ತಿದೆ.
ಸಾವಿರಾರು ರೂ. ಬಿಲ್ ನೋಡಿ ಜನರೇ ಕಂಗಾಲು.
ಇಷ್ಟು ದಿನ ಮಹಾನಗರ ಪಾಲಿಕೆಗೆ ವರ್ಷಕ್ಕೆ ಒಂದು ಬಾರಿ ಮಾತ್ರ ನೀರಿನ ಕಂದಾಯ ಕಟ್ಟುತ್ತಿದ್ದ ಜನರು, ಹೊಸ ಬಿಲ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರು 24/7 ಕುಡಿಯುವ ನೀರಿನ ಬಿಲ್ ಪ್ರತಿ ತಿಂಗಳು ಕಟ್ಟಬೇಕಿದ್ದು, ಒಂದು ವೇಳೆ 3 ತಿಂಗಳಿಗಿಂತ ಹೆಚ್ಚಿಗೆ ಹಣ ಕಟ್ಟದೆ ಹೋದರೆ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ಇಷ್ಟು ದಿನ ಬಿಲ್ ನೀಡದ ಮಂಡಳಿಯು ಇದೀಗ ಒಮ್ಮೆಲೆ 2500 ರಿಂದ 3000 ರೂ.ಗಳ ತನಕ ನೀರಿನ ಬಿಲ್ ನೀಡುತ್ತಿದ್ದು, ಜನ ದಂಗಾಗಿದ್ದಾರೆ.
ಮನೆಯಲ್ಲಿ ಬಳಕೆ ಮಾಡಿದ್ದಕ್ಕಿಂತ ಹೆಚ್ಚಿಗೆ ಬಿಲ್ ಬರುತ್ತಿದೆ. ಒಂದು ತಿಂಗಳಿಗೆ ಇಷ್ಟೊಂದು ಬಿಲ್ ಬಂದರೆ ಹೇಗೆ ಎಂಬುದು ನಾಗರಿಕರ ಪ್ರಶ್ನೆಯಾಗಿದ್ದು, ಇದರ ನಡುವೆ ಅಳವಡಿಸಲಾಗಿರುವ ಮೀಟರ್ ಬೋರ್ಡ್ ಕೂಡ ಸರಿಯಲ್ಲ ಎಂಬ ಆರೋಪವೂ ಸಹ ಕೇಳಿಬರುತ್ತಿದೆ.
ಒಟ್ಟಾರೆ, ನೀರು ಸರಬರಾಜು ಮಂಡಳಿ ಒಂದು ತಿಂಗಳು ನೀಡಿರುವ ಬಿಲ್ ನಲ್ಲಿ ಸಾಕಷ್ಟು ಗೊಂದಲವನ್ನು ಮೂಡಿಸಿದ್ದು, 24/7 ನೀರು ಪೂರೈಕೆ ಸಂಬಂಧ ಸಂಬಂಧ ನಾಗರಿಕರಿಗೆ ಸಮರ್ಪಕ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಒದಿ : https://cnewstv.in/?p=7364
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments