Cnewstv.in / 05.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕೋವಿಡ್ ಮಾರ್ಗಸೂಚಿ ಮೇಲ್ವಿಚಾರಣೆ ಮಾಡಬೇಕಾದ ಗೃಹಸಚಿವರಿಂದಲೇ ನಿಯಮ ಉಲ್ಲಂಘನೆ.
ಶಿವಮೊಗ್ಗ : ರಾಜ್ಯಾದ್ಯಂತ ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೇ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸುದೀರ್ಘ ಸಭೆ ನಡೆಸುತ್ತಿದ್ದಾರೆ.
ಒಂದೇಡೆ ಜನವರಿ 19 ರವರೆಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಅನೇಕ ನಿರ್ಬಂಧಗಳನ್ನು ಸರ್ಕಾರ ವಿಧಿಸಿದ್ದು, ಜನರು ಕೊರೊನಾ ನಿಯಮವನ್ನು ಕಡ್ಡಾಯಾವಾಗಿ ಪಾಲಿಸಬೇಕಿದೆ.
ಮತ್ತೊಂದೆಡೆ ಕೊರೊನಾ ಮಾರ್ಗಸೂಚಿ ಮೇಲ್ವಿಚಾರಣೆ ಮಾಡಬೇಕಾದ ಗೃಹಸಚಿವರೇ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಗೃಹ ಸಚಿವರ ತವರೂರಾದ ತೀರ್ಥಹಳ್ಳಿಯಲ್ಲಿ ಶ್ರೀರಾಮೇಶ್ವರ ದೇವರ ಜಾತ್ರಾ ಮಹೋತ್ಸವ ಕಳೆದ ಮೂರುದಿನಗಳಿಂದ ಅದ್ದೂರಿಯಾಗಿ ನಡೆಯುತ್ತಿದೆ. ಗೃಹಸಚಿವರಾದ ಅರಗ ಜ್ಞಾನೇಂದ್ರ ಅವರೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಚಾಲನೆ ನೀಡಿದ್ದಾರೆ.
ತೀರ್ಥಹಳ್ಳಿ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಮಾರ್ಗಸೂಚಿ ಸಂಪೂರ್ಣ ಕಣ್ಮರೆಯಾಗಿತ್ತು. ಸಾವಿರಾರು ಜನರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ಮಾಸ್ಕ್ , ಸಾಮಾಜಿಕ ಅಂತರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಜಾತ್ರೆಗೆ ಕಿಕ್ಕಿರಿದು ಜನ ಸೇರಿದ್ದರು. ಇಷ್ಟೆಲ್ಲವೂ ಸಹ ಗೃಹಸಚಿವರ ಕಣ್ಣಮುಂದೆ ನಡೆದರೂ ಸಹ ಗೃಹಸಚಿವರು ಮೌನಕ್ಕೆ ಶರಣಾಗಿದ್ದರು.
ಇದನ್ನು ಒದಿ : https://cnewstv.in/?p=7362
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments