Cnewstv.in / 25.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳ ಸಂಗ್ರಹ, ಮ್ಯೂಸಿಯಂ ಸೀಜ್..
ಶಿವಮೊಗ್ಗ : ಪಶುವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೋಮಿನಕೊಪ್ಪ ಸಮೀಪದ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ರೋಗಶಾಸ್ತ್ರ ವಿಭಾಗದ ಮ್ಯೂಸಿಯಂ ಪರಿಶೀಲನೆ ನಡೆಸಿದ ಅಧಿಕಾರಿಗಳು ನಂತರ ಮ್ಯೂಸಿಯಂ ಅನ್ನು ಸೀಜ್ ಮಾಡಿದ್ದಾರೆ. ಶೆಡ್ಯೂಲ್ 1 ಕ್ಕೆ ಸೇರಿದ ಪ್ರಾಣಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಇಟ್ಟುಕೊಂಡಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ, ವನ್ಯಜೀವಿಗಳ ಅಂಗಾಂಗಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮ್ಯೂಸಿಯಂ ಅನ್ನು ಸೀಜ್ ಮಾಡಲಾಗಿದೆ.
ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ವನ್ಯಜೀವಿಗಳ ಅಂಗಾಂಗಗಳನ್ನ ಸಂಗ್ರಹಿಸಿ ವಿಶ್ವವಿದ್ಯಾನಿಲಯದಲ್ಲಿ ಶೇಖರಿಸಿದರು ಎನ್ನಲಾಗುತ್ತಿದೆ. ಅದರೆ ಶೆಡ್ಯೂಲ್ 1ಕ್ಕೆ ಸೇರಿದ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿಡುವುದು ಅಪರಾಧ. ಪಶು ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ಪರವಾನಗಿಯನ್ನು ಪಡೆಯದೆ ಸಂಗ್ರಹಿಸಿಡುವುದರಿಂದ ಮ್ಯೂಸಿಯಂ ಅನ್ನು ಸೀಜ್ ಮಾಡಲಾಗಿದೆ.
ಬೆಂಗಳೂರು ಮತ್ತು ಶಿವಮೊಗ್ಗ ಅರಣ್ಯ ಇಲಾಖೆಯ ಆಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಳಿಯ ನೇತೃತ್ವವನ್ನು ಶಿವಮೊಗ್ಗದ ಡಿಸಿಎಫ್ ರವೀಂದ್ರಕುಮಾರ್ ಹಾಗೂ ಬೆಂಗಳೂರಿನ ಎಸಿಎಫ್ ವೀರೇಶ್ ಗೌಡ ವಹಿಸಿದರು.
ಇದನ್ನು ಒದಿ : https://cnewstv.in/?p=7232
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments