Cnewstv.in / 24.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗದ ರೈಲಿಗೂ ಬಂತು ವಿಸ್ಟಾಡೋಮ್ ಬೋಗಿ.
ಪ್ರಯಾಣಿಕರ ಕಣ್ಣಲ್ಲಿ ಮಲೆನಾಡ ಪ್ರಕೃತಿ ಸೌಂದರ್ಯ.
ಶಿವಮೊಗ್ಗ : ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಶವಂತಪುರ – ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್ ಪ್ರೆಸ್ ( ರೈಲು ಸಂಖ್ಯೆ 16579/16580 ) ರೈಲಿಗೆ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.
ದಿನಾಂಕ 25.12. 2021 ರಿಂದ 31.03.2022 ರವರೆಗೆ ಯಶವಂತಪುರ ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ( ರೈಲು ಸಂಖ್ಯೆ. 16579 ) ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.
ದಿನಾಂಕ 25.12. 2021 ರಿಂದ 31.03.2022 ರವರೆಗೆ ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್ ಪ್ರೆಸ್ ( ರೈಲು ಸಂಖ್ಯೆ. 16580 ) ರೈಲಿನಲ್ಲಿ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.
ವಿಸ್ಟಾಡೋಮ್ ಬೋಗಿ ವಿಶೇಷತೆಗಳೇನು ಗೊತ್ತಾ ?
ಇದು ಎಸಿ ಕೋಚಿನ ಬೋಗಿಯಾಗಿರುತ್ತದೆ. ಬೋಗಿಗಳ ಕಿಟಕಿಗಳು ಮೇಲ್ಛಾವಣಿಗಳು ಗಾಜಿನಿಂದ ಇರುತ್ತದೆ. ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ ಈ ಬೋಗಿಯಾ ಸೀಟುಗಳು ಯಾವ ದಿಕ್ಕಿಗೆ ಬೇಕಾದರೂ ತಿರುಗುತ್ತದೆ.
ಬೋಗಿಯಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳಿವೆ. ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.
ಇದನ್ನು ಒದಿ : https://cnewstv.in/?p=7218
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments