Cnewstv.in / 24.12.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನೆಲ ಅಗೆಯುವ ಕಾಮಗಾರಿ ಮುನ್ನ ಮೆಸ್ಕಾಂ ಸಂಪರ್ಕಿಸಿ.
ಶಿವಮೊಗ್ಗ : ಮಾಡೆಲ್ ಸಬ್‍ಡಿವಿಷನ್ ಯೋಜನೆಯಡಿ ಆಲ್ಕೊಳ 110/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಎಫ್-10, ಗಾಂಧಿನಗರ 11 ಕೆವಿ ಫೀಡರ್‍ಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಈ ಭೂಗತ ಕೇಬಲ್‍ಗಳನ್ನು ಡಿ.21 ರಂದು ಚಾಲನೆಗೊಳಿಸಲಾಗಿದೆ. ಈ ಮಾರ್ಗದಲ್ಲಿ ಭೂಮಿ ಅಗೆಯುವ ಕಾಮಗಾರಿಗಳನ್ನು ಮೆಸ್ಕಾಂ ಗಮನಕ್ಕೆ ಬಾರದಂತೆ ಕೈಗೆತ್ತಿಕೊಳ್ಳಬಾರದು.
ವಿದ್ಯುತ್ ಕೇಬಲ್ ಮಾರ್ಗವು ಆಲ್ಕೊಳ ವಿದ್ಯುತ್ ಉಪ ಕೇಂದ್ರದಿಂದ ಹೊರಟು 100 ಅಡು ನಯಝ್ತರಸ್ತೆತ ಎಡ ಭಾಗದಲ್ಲಿ ಫುಡ್ ಕಾರ್ಪೋರೇಷನ್, ಎಪಿಎಂಸಿ ಯಾರ್ಡ್ ಎದುರು, ಕರಿಯಣ್ಣ ಬಿಲ್ಡಿಂಗ್, ವೈಭವ್ ಗ್ರಾನೈಟ್ಸ್, ಪೊಲೀಸ್‍ಚೌಕಿ, ಶಿವಾಲಯ ಎದುರು, ವಿನೋಭನಗರ ಆಟೋಸ್ಟ್ಯಂಡ್, ಜೈಲ್ ಕಾಂಪೌಂಡ್, ರಾಜೇಂದ್ರನಗರ, ಲಕ್ಷ್ಮೀ ಟಾಕೀಸ್ ಹಿಂಭಾಗ, ರವೀಂದ್ರನಗರ ಚಾನಲ್, ಲಕ್ಷ್ಮೀ ನರ್ಸಿಂಗ್ ಹೋಂ, ರವೀಂದ್ರನಗರ ಗಣಪತಿ ದೇವಸ್ಥಾನ, ರವೀಂದ್ರನಗರ ಸ್ಕೂಲ್, ಗಾಂಧಿನಗರ ಮುಖ್ಯರಸ್ತೆ, ಗಾಂಧಿನಗರ ಪಾರ್ಕ್, ಭಂಡಾರಿ ಗ್ಯಾಸ್, ಎಎನ್‍ಕೆ ಮುಖ್ಯರಸ್ತೆ, ಅಚ್ಯುಥ್‍ರಾವ್ ಲೇಔಟ್, ವೆಂಕಟೇಶನಗರ, ಕುವೆಂಪು ಮುಖ್ಯರಸ್ತೆ, ನಂಜಪ್ಪ ಆಸ್ಪತ್ರೆ ಎದುರು, ಜೈಲ್ ಸರ್ಕಲ್, ದುರ್ಗಿಗುಡಿ ರಸ್ತೆ, ಆರ್.ಎಂ.ಆರ್ ಮುಖ್ಯರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ, ಜಿಲ್ಲಾ ಪಂಚಾಯತ್ ಎದುರು, ಶಿವಮೂರ್ತಿ ಸರ್ಕಲ್ ಮುಖೇನ ಹಾದು ಹೋಗಿರುತ್ತದೆ.
ಈ ಮಾರ್ಗಗಳಲ್ಲಿ ಸಾರ್ವಜನಿಕರು ಅಥವಾ ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಭೂಮಿಯನ್ನು ಅಗೆಯುವ ಕಾಮಗಾರಿಗಳನ್ನು ಮೆಸ್ಕಾಂ ಗಮನಕ್ಕೆ ಬಾರದಂತೆ ಕೈಗೆತ್ತಿಕೊಳ್ಳಬಾರದೆಂದು ಮೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=7216
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments