Cnewstv.in / 29.11.2021/ ಶಿವಮೊಗ್ಗ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪರೀಕ್ಷಾ ವ್ಯವಸ್ಥೆ ಸರಿಪಡಿಸಿ : ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಶಿವಮೊಗ್ಗ : ಯುಜಿಸಿ ನಿಯಮಾವಳಿಯಂತೆ ಪರೀಕ್ಷೆಗಳು ನಡೆಯಬೇಕು.ನಿಗದಿತ ಪರೀಕ್ಷಾ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿ, ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಾನೂನು ವಿವಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೆ ಇರುವುದರಿಂದ ಐದು ಮತ್ತು ಮೂರನೇ ವರ್ಷದ ಕಾನೂನು ವಿದ್ಯಾರ್ಥಿಗಳ ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗಿದೆ. 2020 ನೇ ಸಾಲಿನ ಡಿಸೆಂಬರ್ ನಲ್ಲಿ ನಿಗದಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೊರೊನಾ ಕಾರಣದಿಂದಾಗಿ 2021ರ ಮಾರ್ಚಿನಲ್ಲಿ ನಡೆಸಲಾಯಿತು. ಅದರ ಫಲಿತಾಂಶವನ್ನು 7 ತಿಂಗಳ ನಂತರ ಪ್ರಕಟಿಸಲಾಯಿತು. ಇದರಿಂದ ಮುಂದಿನ ಸೆಮಿಸ್ಟರ್ ಗಳಿಗೆ ಪ್ರವೇಶ ಕೊಡುವುದು ಸಹ ತಡವಾಗಿದೆ.
2023 ಕ್ಕೆ ಮುಗಿಯಬೇಕಾಗಿದ್ದ ಕೋರ್ಸ್ ಗಳು 2024ಕ್ಕೆ ಮುಗಿಯಲಿದೆ. ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಒಂದು ವರ್ಷ ವ್ಯಾಸಂಗ ಮಾಡಬೇಕಾಗಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಇದನ್ನು ಒದಿ : https://cnewstv.in/?p=6937
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments