Cnewstv.in / 13.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಅಡಿಕೆ ಕ್ಯಾನ್ಸರ್ ಕಾರಕ ಹಾಗೂ ಅನೇಕ ರೋಗಗಳು ಬರುವುದರಿಂದ ಅಡಿಕೆಯ ಮಾನವ ಬಳಕೆಯಿಂದ ನಿಷೇಧಿಸಬೇಕೆಂದು ಜಾರ್ಖಂಡ್ ಬಿಜೆಪಿ ಸಂಸದರಾದ ಶ್ರೀ ನಿಶಿಕಾಂತ್ ದುಬೈ ರವರು ಹೇಳಿಕೆಯನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆಯವರು ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕಯಲ್ಲಿ ಅಡಿಕೆಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಅಡಿಕೆ ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿದೆ ಔಷಧೀಯ ಗುಣಗಳನ್ನು ಹೊಂದಿದೆ ಹೀಗಿರುವಾಗ ಅಡಿಕೆಯಿಂದ ಕ್ಯಾನ್ಸರ್ ಕಾರಕ ಎಂದು ಹೇಳಿರುವುದು ಖಂಡನೀಯ.
ಬಿಜೆಪಿ ಪಕ್ಷದ ನಾಯಕರು, ಸಂಸದರು ಹಾಗೂ ಸರಕಾರಗಳ ನಿರಂತರವಾಗಿ ಅಡಿಕೆ ವಿರೋಧದ ಅಪಪ್ರಚಾರ ಮಾಡುತ್ತಿದ್ದಾರೆ ಪ್ರಧಾನಮಂತ್ರಿಗಳು ತಮ್ಮದೇ ಪಕ್ಷದ ಸಂಸದರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮೌನವಾಗಿರುವುದು ಅವರಿಗೆ ಅಡಿಕೆಯ ಬಗ್ಗೆ ಇರುವ ನಿಜವಾದ ಗೌರವ ಬಹಿರಂಗಪಡಿಸಿದೆ. ಬಿಜೆಪಿಗೆ ಅಡಿಕೆ ಕೇವಲ ರಾಜಕಾರಣದ ವಸ್ತುವಾಗಿದೆ.
ಯಾಕೆ ಮೌನ ವಹಿಸಿದ್ದೀರಿ ??
ಕರ್ನಾಟಕ ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಲೋಕಸಭಾ ಕ್ಷೇತ್ರಗಳ ಸಂಸತ್ ಸದಸ್ಯರಾದ ಬಿ.ವೈ.ರಾಘವೇಂದ್ರ, ಸಚಿವರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗ್ಡೆ, ಬಸವರಾಜ, ಶ್ರೀ ಸಿದ್ದೇಶ್ವರ ಇನ್ನಿತರರು ಈ ಬಗ್ಗೆ ಪ್ರತಿಕ್ರಿಯಿಸದೇ ಇರುವುದು ಅಡಿಕೆ ಬಗ್ಗೆ ಪ್ರತಿಕ್ರಿಯಿಸದೆ ಮೌನವಾಗಿರುವುದು ಅಡಿಕೆಯ ಬಗ್ಗೆ ಇರುವ ನಿಲುವು ಬಹಿರಂಗವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಪ್ರೀಂಕೋರ್ಟಿಗೆ ಅಡಿಕೆ ಹಾನಿಕಾರಕವಲ್ಲ ಎಂದು ಅಫಿಡಿವಿಟ್ ಸಲ್ಲಿಸಿ, ಬಿಜೆಪಿ ನಾಯಕರು ಹಾಗೂ ಸರ್ಕಾರ ಅಂಟಿಸಿರುವ ಕಳಂಕವನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು ಹಾಗೂ ಅಡಿಕೆಗೆ ಗೌರವ ಹಾಗೂ ಅಡಿಕೆ ಬೆಳೆಗಾರರ ಹಿತರಕ್ಷಣೆಯ ಕಾಪಾಡಬೇಕೆಂದು ವಿನಂತಿಸಿಕೊಂಡರು.
ಇದನ್ನು ಒದಿ : https://cnewstv.in/?p=6777
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments