Cnewstv.in / 10.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಹೃದಯಾಘಾತದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅ. 29 ರಂದು ನಿಧನರಾದರು. ಕೇವಲ ನಟನೆ ಮಾತ್ರವಲ್ಲದೆ ಸಮಾಜಸೇವೆಯಲು ತಮ್ಮನ್ನು ತಾವು ತೊಡಗಿಸಿಕೊಂಡರು. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಅಗಲಿಕೆಗೆ ಅಭಿಮಾನಿಗಳು ಅನೇಕ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಅಂತೆಯೇ ಅರಣ್ಯ ಇಲಾಖೆಯಿಂದ ನಟ ಪುನೀತ್ ಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲಾಯಿತು.
ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೈಬೈಲು ಆನೆ ಬಿಡಾರದ ಮರಿಯಾನೆ ಗೆ ಪುನೀತ್ ಹೆಸರಿಟ್ಟು ಅರಣ್ಯ ಇಲಾಖೆಯ ಅಧಿಕಾರಿಗಳು ಗೌರವ ಸಲ್ಲಿಸಿದ್ದಾರೆ.
ಬಿಡಾರದ ನೇತ್ರಾ ಎಂಬ ಹೆಣ್ಣು ಆನೆಗೆ ಕಳೆದ ಎರಡು ವರ್ಷದ ಹಿಂದೆ ಗಂಡು ಅನೆ ಜನಿಸಿತ್ತು. ಅದಕ್ಕೆ ಪುನೀತ್ ಎಂದು ಹೆಸರಿಡಲಾಗಿದೆ.
ತಾಯಿ ಆನೆಯಿಂದ ಮರಿಯಾನೆ ಬೇರ್ಪಡಿಸಲು ನಡೆಸುವ ವೀನಿಂಗ್ ಪ್ರಕ್ರಿಯೆಯನ್ನು ಇಂದು ನಡೆಸಲಾಯಿತು. ಈ ವೀನಿಂಗ್ ಪ್ರಕ್ರಿಯೆಯಲ್ಲಿ ಪುನೀತ್ ಹೆಸರನ್ನು ಅಂತಿಮವಾಗಿ ನಿರ್ಧಾರಲಾಗಿದೆ.
ವನ್ಯಜೀವಿ ಸಂಬಂಧಿತ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪುನೀತ್ ರಾಜ್ ಕುಮಾರ್ ಕೆಲತಿಂಗಳ ಹಿಂದೆಯಷ್ಟೇ ಸಕ್ರೇಬೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಮರಿಯಾನೆ ಕಂಡು ನಟ ಪುನೀತ್ ಖುಷಿಯಿಂದ ಮುದ್ದಾಡಿದ್ದರು. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಪುನೀತ್ ರಾಜಕುಮಾರ್ ಹೊಂದಿದ್ದ ವಿಶೇಷ ಕಾಳಜಿಯನ್ನು ನೆನಪಿಸಿಕೊಂಡರು.
ಇದನ್ನು ಒದಿ : https://cnewstv.in/?p=6755
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments