Cnewstv.in / 8.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೋವಿಡ್ ವಿಚಾರವಾಗಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎರಡು ಅಲೆಗಳು ಸಂಪೂರ್ಣ ವಾಗಿ ಕಡಿಮೆ ಹಂತಕ್ಕೆ ಬರುವ ತನಕ ರಾಜ್ಯ ಸರ್ಕಾರ ರಾಜ್ಯದ ಶಾಲಾ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿತ್ತು , ಈಗಾಗಲೇ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳನ್ನು ಸರ್ಕಾರ ತೆರೆದಿದ್ದು ಮಕ್ಕಳು ಶಾಲೆಗೆ ಯಾವುದೇ ಭಯವಿಲ್ಲದೆ ಆಗಮಿಸುತ್ತಿದ್ದು ಅದರಂತೆ ಇಂದು ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿದ್ದು ಶಿವಮೊಗ್ಗ ನಗರದಲ್ಲಿ ಸಹ ಹೊಸಮನೆ ಬಡಾವಣೆಯಲ್ಲಿ ಮೂರು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಮೊದಲನೇ ದಿನ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಮಕ್ಕಳಿಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಸಿಹಿ ಮತ್ತು ಚಾಕ್ಲೆಟ್ ನೀಡುವ ಮುಖಾಂತರ ಮಕ್ಕಳನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ಅವರು ಮಕ್ಕಳನ್ನು ಮನೆಯಿಂದ ಪೋಷಕರು ಅಂಗನವಾಡಿ ಕೇಂದ್ರಗಳಿಗೆ ಕಳಿಸುವಾಗ ಯಾವ ಭಯಪಡುವ ಅವಶ್ಯಕತೆಯಿಲ್ಲ ಈಗಾಗಲೇ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮುಂಜಾಗೃತ ಸುರಕ್ಷತೆ ಗಳನ್ನು ಅಳವಡಿಸಿಕೊಂಡಿದ್ದು ಮಕ್ಕಳಿಗೆ ಎಲ್ಲ ಮುಂಜಾಗ್ರತಾ ಕ್ರಮಗಳ ಮುಖಾಂತರ ಪಾಠಪ್ರವಚನಗಳನ್ನು ನೀಡಲಾಗುವುದು ಭಯ ಬೇಡ ಆದರೆ ಜಾಗೃತಿಯಿಂದ ವಹಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ , ವಜ್ರೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾದ ಸೋಮೇಶ್ , ಅಂಗನವಾಡಿಯ ಕೇಂದ್ರದ ಶಾಂತ ಸಮಾಧಾನ, ಗೌರಮ್ಮ , ಮಕ್ಕಳ ಪೋಷಕರು ಶಿವು ವಿನಯ್ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=6735
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments