cnewstv.in / 09.10.2021/ ವಿಜಯಪುರ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವಿಜಯಪುರ : 14 ವರ್ಷದ ಹುಡುಗ PHD ಪದವಿಯನ್ನ ಸ್ವೀಕರಿಸಿದ್ದಾನೆ. ಅದರ ಹಿಂದಿನಕಥೆ ಎಲ್ಲರ ಕಣ್ಣಂಚಲ್ಲಿ ನೀರು ತರುತ್ತದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಆಯೋಜಿಸಿದ್ದ 70 ಮತ್ತು 71ನೇ ಘಟಿಕೋತ್ಸವದಲ್ಲಿ 14ವರ್ಷದ ಮಲ್ಲಿಕಾರ್ಜುನ್ ಗಣ್ಯರಿಂದ ಪಿಎಚ್ ಡಿ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾನೆ. ಅಸಲಿಗೆ ಇದು ಮಲ್ಲಿಕಾರ್ಜುನ ತಂದೆಯ ಆಸೆಯಾಗಿತ್ತು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದ ರಾಘವೇಂದ್ರ ಎಂಬುವವರು ಬೀರೇಶ್ವರ ಬಿಹರ್ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು IMPACTS OF DIALOGUE METHOD ON ACHIEVEMENT AND IMPROVEMENT IN ENGLISH LANGUAGE SKILLS OF NINTH STANDARD” ಎಂಬ ವಿಷಯದ ಮೇಲೆ PhD ಗೆ ನೋಂದಾಯಿಸಿಕೊಂಡಿದ್ದಾರೆ. ಪರ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಮನ್ನಣೆ ನೀಡಿ ಡಾಕ್ಟರೇಟ್ ನೀಡಿತ್ತು.
ಆದರೆ ಇದನ್ನು ಸಂಭ್ರಮಿಸುವ ಅದೃಷ್ಟ ರಾಘವೇಂದ್ರ ಅವರಿಗೆ ಇರಲಿಲ್ಲ. ಮೇ 26ರಂದು ಕೊರೊನಾ ಸೋಂಕಿನಿಂದ ರಾಘವೇಂದ್ರರವರು ಬಲಿಯಾದರು. ಆತನ ತಂದೆಯ ಕಡೆಯ ಆಸೆ ಯಾಗಿದ್ದ Phd ಪದವಿಯನ್ನು ಆತನ ಮಗ 14ವರ್ಷದ ಮಲ್ಲಿಕಾರ್ಜುನ್ ಗಣ್ಯರಿಂದ ಸ್ವೀಕರಿಸಿದ್ದಾನೆ. ಈ ದೃಶ್ಯ ನೋಡಿದವರ ಕಣ್ಣಲ್ಲಿ ನೀರು ತರಿಸಿತ್ತು.
ಇದನ್ನು ಓದಿ : https://cnewstv.in/?p=6395
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments