Cnewstv.in / 21.09.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಸಣ್ಣ ಶಾಲೆ, ದೊಡ್ಡ ಶಾಲೆ ಎಂಬುದಿರುವುದಿಲ್ಲ. ದೊಡ್ಡ ಮತ್ತು ಮಾದರಿ ಶಾಲೆಯಾಗಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಕೇವಲ ಶಿಕ್ಷಣದಲ್ಲಿ ಏಕಾಗ್ರತೆ ವಹಿಸಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಇಂದು ನಗರದ ಹರಿಗೆಯ 75 ವರ್ಷ ತುಂಬಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಊಟದ ತಟ್ಟೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿದ್ದಾಗ ಮಕ್ಕಳ ಗಮನ ಕೇವಲ ಓದಿನ ಮೇಲೆ ಇರಬೇಕು. ಶಿಕ್ಷಣ ಒಂದು ಶಕ್ತಿ. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ದಿ ಸಾಧ್ಯ. ಬಹಳಷ್ಟು ಪೋಷಕರು ಕಷ್ಟುಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳೂ ಕೂಡ ತಂದೆ-ತಾಯಿ ಮತ್ತು ಶಿಕ್ಷಕರಿಗೆ ಗೌರವ ನೀಡಿ ಕಷ್ಟಪಟ್ಟು ಓದಿ ಮುಂದೆ ಬರಬೇಕು. ಕೋಟಿ ಕೊಟ್ಟರೂ ವಿದ್ಯೆಗೆ ಸರಿಸಾಟಿ ಇಲ್ಲ. ಆದ ಕಾರಣ ಶೇ.100 ರಷ್ಟು ಏಕಾಗ್ರತೆ ವಿದ್ಯಾಭ್ಯಾಸದಲ್ಲಿ ಇರಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಲ್ಲ ವಿದ್ಯಾರ್ಥಿಗಳು ಕನಿಷ್ಟ ಸ್ನಾತಕೋತ್ತರ ಪದವಿ ಪಡೆಯಬೇಕು. ಸರ್ಕಾರದಿಂದ ಎಲ್‍ಕೆಜಿಯಿಂದ ಹಿಡಿದು ಪದವಿಗಳು ಮುಗಿಯುವವರೆಗೆ ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತವೆ. ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
ಇದನ್ನು ಓದಿ : https://cnewstv.in/?p=6138
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments