Cnewstv.in / 07.09.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ರಾಜ್ಯದಲ್ಲಿ ಕೊರೋನ ಆರ್ಭಟ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರ್ತಾ ಇದೆ ಎನ್ನುವಾಗಲೇ ಬಿಬಿಎಂಪಿ ಮನೆಮನೆ ಆರೋಗ್ಯ ಸಮೀಕ್ಷೆ ಬಿಗ್ ಶಾಕ್ ನೀಡಿದೆ.
21 ದಿನಗಳು ಬಿಬಿಎಂಪಿ ಮನೆಮನೆ ಆರೋಗ್ಯ ಸಮೀಕ್ಷೆ ನಡೆಸಿದೆ. 2,48,280 ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿದ್ದಾರೆ. ಇದರಲ್ಲಿ 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 22,362 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.
ಕೊರೊನಾ ಸೋಂಕಿತರಿಗೆ, ಯಾವುದೇ ಕೊರೊನಾ ಲಕ್ಷಣಗಳೇ ಇಲ್ಲ, ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಬಿಎಂಪಿ ವೈದ್ಯರು ಮನೆಗೆ ಬಂದು ಪರೀಕ್ಷೆ ಮಾಡಿದಾಗ ಅಷ್ಟೇ ಸೋಂಕು ಇರುವ ವಿಚಾರ ಬೆಳಕಿಗೆ ಬಂದಿದೆ.
ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಏಕಾಏಕಿ ಸೋಂಕು ಹೆಚ್ಚಳವಾಗುತ್ತಾ ಎಂಬ ಅನುಮಾನ ವ್ಯಕ್ತವಾಗಿದೆ ? ಒಟ್ಟಿನಲ್ಲಿ ಬಿಬಿಎಂಪಿ ಮೂರನೇ ಅಲೆ ಎದುರಿಸಲು ಸಿದ್ಧವಾಗಬೇಕಿದೆ.
ಇದನ್ನು ಓದಿ : https://cnewstv.in/?p=5820
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments