Cnewstv.in / 30.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ ವಿವಿಧ 19 ಸ್ಥಳಗಳಲ್ಲಿ ಗಿಡ ನೆಟ್ಟು 3 ವರ್ಷಗಳ ಕಾಲ ಪೋಷಿಸುವ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದ್ದು, ಇದಕ್ಕೆ ತಗಲುವ ಅನುದಾನವನ್ನು ಸ್ಮಾರ್ಟ್‍ಸಿಟಿ ವತಿಯಿಂದಲೇ ಭರಿಸಲಾಗುತ್ತಿದೆ.
ಕೃಷ್ಣ ಮಠ-55, ವಾಜಪೇಯಿ ಲೇಔಟ್-1000, ವಾಜಪೇಯಿ ಲೇಔಟ್2-2000, ಶಾರದಮ್ಮ ಲೇಔಟ್-150, ಶಿವಾಲಯ-175, ತರಳಬಾಳು ಲೇಔಟ್-150, ಸೂರ್ಯ ಲೇಔಟ್-950, ಬಸವೇಶ್ವರ ನಗರ-400, ಕುವೆಂಪು ಲೇಔಟ್-850, ಸಿದ್ದಗಂಗಾ ಲೇಔಟ್-90, ಸಿದ್ದೇಶ್ವರ ನಗರ-300, ರಾಜೇಂದ್ರ ನಗರ-350, ತರಳಬಾಳು ಹಾಸ್ಟೆಲ್-100, ಅಶ್ವತ್ಥ ನಗರ ಹಾಗೂ ಎಲ್‍ಬಿಎಸ್ ನಗರ-300, ವಿದ್ಯಾನಗರ ಜ್ಞಾನ ವಿಹಾರ ಲೇಔಟ್-290 ಗೋಪಾಳ ಪಾರ್ಕ್ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರ-170, ಸ್ವರ್ಣ ಮಿತ್ರ ಲೇಔಟ್-100, ಮೆಗ್ಗಾನ್ ಆಸ್ಪತ್ರೆ ಆವರಣ-1000, ಮಲ್ಲೇಶ್ವರ ನಗರ-100, ಅವೆನ್ಯೂ ಟ್ರೀಸ್ ಫಾರ್ ಸ್ಟ್ರೀಟ್-100.
ಈ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಅಥವಾ ಧನ ಸಹಾಯ ಅಪೇಕ್ಷಿಸಲಾಗಿರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ದೇಣಿಗೆ ಅಥವಾ ಧನಸಹಾಯ ಕೋರಿದಲ್ಲಿ ದಯಮಾಡಿ ನೀಡಬಾರದೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಟಾರೆ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=5655
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments