Breaking News

ಶಿವಮೊಗ್ಗ ಜಿಲ್ಲಾ ಪೋಲಿಸರ ಭರ್ಜರಿ ಕಾರ್ಯಾಚರಣೆ, ಅಂತರ್ ಜಿಲ್ಲಾ ಕಳ್ಳರಿಂದ 10 ಲಕ್ಷ ಮೌಲ್ಯದ 22 ಬೈಕ್ ವಶ.

Cnewstv.in / 29.08.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನನ್ನು ಆರೆಸ್ಟ್ ಮಾಡಿದ್ದಾರೆ. ಬಂಧಿತ ರನ್ನು ಭದ್ರಾವತಿಯ ಸುಹೇಲ್ ಪಾಷಾ, ಶಿವಮೊಗ್ಗ ನಗರದ ಮೊಹಮ್ಮದ್ ಹ್ಯಾರಿಸ್, ಫಜಲು ಹಾಗೂ ಸಾಹೀಲ್ ಶೇಟ್ ಎಂದು ಗುರುತಿಸಲಾಗಿದೆ.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ, ಅಂತರ್ ಜಿಲ್ಲಾ ಕಳ್ಳರನ್ನ ಶಿವಮೊಗ್ಗ ಪೋಲಿಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಹತ್ತು ಲಕ್ಷ ಮೌಲ್ಯದ 22 ಬೈಕ್ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ 03, ದೊಡ್ಡಪೇಟೆಯಲ್ಲಿ 05, ವಿನೋಬನಗರ ಹಾಗೂ ಜಯನಗರ ಠಾಣೆಯಲ್ಲಿ ತಲಾ 02
ಶಿರಾಳಕೊಪ್ಪ ಠಾಣೆಯಲ್ಲಿ 03, ಶಿವಮೊಗ್ಗ ರೈಲ್ವೆ ಪೋಲಿಸ್ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ ಮತ್ತು ಕುಂಸಿ ಪೋಲಿಸ್ ಠಾಣೆಯಲ್ಲಿ ತಲಾ 01 ಪ್ರಕರಣ ದಾಖಲಾಗಿತ್ತು.

ದಾವಣಗೆರೆಯ ಹೊನ್ನಾಳಿ ಠಾಣೆಯ ಲ್ಲಿ 02 ಹಾಗೂ ಚಿಕ್ಕಮಗಳೂರಿನ ಬೀರೂರು ಹಾಗೂ ಕಡೂರು ಪೋಲಿಸ್ ಠಾಣೆಯಲ್ಲಿ ತಲಾ 01 ಪ್ರಕರಣ ದಾಖಲಾಗಿತ್ತು.

ತುಂಗಾನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ನೇತೃತ್ವವನ್ನು ಶಿವಮೊಗ್ಗ ಸಿಟಿ ಡಿವೈಎಸ್ಪಿ ಪ್ರಶಾಂತ್ ವಹಿಸಿಕೊಂಡಿದ್ದರು.

ಇದನ್ನು ಒದಿ : https://cnewstv.in/?p=5636

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*