Cnewstv.in / 18.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಬ್ಯಾಂಕ್ ಆಫ್ ಬರೋಡಾ ಎಟಿಎಂ ಗಳಲ್ಲಿ ಕನ್ನಡ ಭಾಷೆ ಅಲಭ್ಯತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬ್ಯಾಂಕ್ ಮಾನ್ಯೇಜರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ವಿಜಯ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬರೋಡ ಗಳೊಂದಿಗೆ ಸೇರ್ಪಡೆಗೊಳಿಸಲಾಗಿದೆ. ಅಂತೆಯೇ ವಿಜಯ ಬ್ಯಾಂಕಿನ ಎಲ್ಲ ಎಟಿಎಂಗಳನ್ನು ಬ್ಯಾಂಕ್ ಆಫ್ ಬರೋಡಾ ಎಟಿಎಂ ಗಳನ್ನಾಗಿ ಬದಲಾಯಿಸಲಾಗಿದೆ. ಪ್ರಸ್ತುತ ಇರುವ ಎಲ್ಲ ಎಟಿಎಂಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಯ ಆಯ್ಕೆ ಇರುತ್ತದೆ. ಎಟಿಎಂ ನಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ನೀಡಿದೆ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ.
ಎಟಿಎಂನ ಹೊರಭಾಗದಲ್ಲಿ ಚಿನ್ನದ ಸಾಲ, ಫಿಕ್ಸಡ್ ಡೆಪಾಸಿಟ್ ಗಳಂತಹ ಲಾಭದಾಯಕ ವಿಷಯಗಳನ್ನು ಕನ್ನಡದಲ್ಲಿ ಹಾಕಿದ್ದಾರೆ. ಕನ್ನಡವನ್ನು ಅವರ ಲಾಭಕ್ಕಾಗಿ ಮಾತ್ರ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಅಗ್ರ ಭಾಷೆ. ಕನ್ನಡಿಗರಿಗೆ ಈ ಬ್ಯಾಂಕಿನ ಎಟಿಎಂಗಳಲ್ಲಿ ವ್ಯವಹರಿಸಲು ತೊಂದರೆಯಾಗುತ್ತಿದೆ ತಕ್ಷಣವೇ ಇದನ್ನು ಸರಿ ಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ಜಯಕೃಷ್ಣ ಶಶಿಕುಮಾರ್ ಸತೀಶ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=5466
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments