Cnewstv.in / 11.08.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ 2021-22 ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಆಗಸ್ಟ್ 31ರ ಒಳಗೆ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಈ ಬಾರಿ ಎಲ್ಲಾ ವಿದ್ಯಾರ್ಥಿಗಳು (ಒಬ್ಬರನ್ನು ಬಿಟ್ಟು) SSLC ಯಲ್ಲಿ ಉತ್ತೀರ್ಣರಾಗಿರುವುದರಿಂದ ಪಿಯುಸಿ ದಾಖಲಾತಿ ಪ್ರಮಾಣ ಹೆಚ್ಚಾಗಲಿದೆ ಹಾಗೂ ಆಗಸ್ಟ್ 16 ರಿಂದ ತರಗತಿಗಳು ನಡೆಯಲಿದೆ. ಪ್ರಥಮ ಪಿಯುಸಿ ಎ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 2021 22 ನೇ ಸಾಲಿನ ಪ್ರವೇಶ ಮಾರ್ಗಸೂಚಿಯಂತೆ ಶುಲ್ಕವನ್ನು ಪಡೆಯಬೇಕು.
ದಂಡ ಶುಲ್ಕವಿಲ್ಲದೆ ಆಗಸ್ಟ್ 31ರ ವರೆಗೆ ದಾಖಲಾತಿ ಪಡೆಯಬಹುದು. ಸೆಪ್ಟೆಂಬರ್ 1ರಿಂದ 11ರ ಒಳಗೆ 670 ರೂಪಾಯಿ ವಿಳಂಬ ಶುಲ್ಕವನ್ನು ನೀಡಬೇಕು. ಸೆಪ್ಟೆಂಬರ್ 12 ರಿಂದ 25 ಒಳಗೆ 2890 ರೂಪಾಯಿ ದಂಡ ಶುಲ್ಕ ನೀಡಿ ದಾಖಲಾತಿಗಳನ್ನು ಪಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಇದನ್ನು ಒದಿ : https://cnewstv.in/?p=5367
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments