ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಕೆ.ವಿ.ಶಿವಕುಮಾರ್ ಹಾಗೂ ಗೋಪಾಲ ಯಡಗೆರೆ ನೇಮಕ.

Cnewstv.in / 27.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ನಮ್ಮ ನಾಡು ದಿನ ಪತ್ರಿಕೆಯ ಸಂಪಾದಕರಾದ ಕೆ.ವಿ ಶಿವಕುಮಾರ್ ಹಾಗೂ ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರರಾದ ಗೋಪಾಲ ಯಡಗೆರೆ ಅವರನ್ನು ನೇಮಕ ಮಾಡಲಾಗಿದೆ.

ಕೆ.ವಿ.ಶಿವಕುಮಾರ್

ಭದ್ರಾವತಿ ತಾಲೂಕಿನ ಆಗರದಹಳ್ಳಿಯ ಅಶೋಕನಗರ ಶಿವಕುಮಾರ್ ಅವರು ಶಿವಮೊಗ್ಗ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ನಂತರ ಅದೇ ಕಾಲೇಜಿನಲ್ಲಿ ಎಲ್ ಎಲ್ ಬಿ ಮಾಡಿ ವಕೀಲ ವೃತ್ತಿಯನ್ನು ಆರಂಭಿಸಿದರು. ನಂತರ ನಮ್ಮ ನಾಡು ದಿನಪತ್ರಿಕೆಯನ್ನು ಆರಂಭಮಾಡಿ 21ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ತಮ್ಮದೇ ಆದ ಸ್ವಂತ ಪ್ರಿಂಟಿಂಗ್ ಯೂನಿಟನ್ನ ಹಾಗೆ ತಮ್ಮದೆ ಅದಾ ಆ್ಯಡ್ ಏಜೆನ್ಸಿಯನ್ನು ಕೂಡ ಹೊಂದಿದ್ದಾರೆ.

ನಮ್ಮ ನಾಡು ಕನ್ನಡ ದಿನಪತ್ರಿಕೆಯ ವೃತ್ತಿಪರತೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012ರಲ್ಲಿ ಆಂದೋಲನ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸಂಘಟನಾತ್ಮಕವಾಗಿ ಅನೇಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲದೆ ಸಮಾಜಸೇವೆಯಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನೂ ಮಾಡಿದ್ದಾರೆ. ಉದ್ಯಮದಲ್ಲೂ ಸಹ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.

ಗೋಪಾಲ ಯಡಗೆರೆ 

ಮೂಲತಹ ಎನ್ಆರ್ ಪುರ ತಾಲೂಕಿನ ಯಡಗೆರೆ ಊರಿನವರಾದ ಗೋಪಾಲ್ ಯಡಗೆರೆಯವರು, ಜೆಸಿಬಿ ಎಂ ಕಾಲೇಜು ಶೃಂಗೇರಿಯಲ್ಲಿ ತಮ್ಮ ಬಿ.ಎಸ್.ಸಿ ವಿದ್ಯಾಭ್ಯಾಸವನ್ನು ಮುಗಿಸಿದ ಬೆಂಗಳೂರಿನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿ ನಂತರ ಶಿವಮೊಗ್ಗದ ಉದಯವಾಣಿ ಪತ್ರಿಕೆಯ ವರದಿಗಾರರಾಗಿ 28 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಶಿವಮೊಗ್ಗ ಸೀನಿಯರ್ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಸಹ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಜಾವಾಣಿ ಪತ್ರಿಕೆಯಲ್ಲಿ ಮಕ್ಕಳ ಲೇಖನವನ್ನು ಬರೆದಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳನ್ನು ಬರೆದು ಬೆಸ್ಟ್ ಡೈರೆಕ್ಟರ್ ಎಂಬ ಬಿರುದನ್ನು ಸಹ ಪಡೆದಿದ್ದಾರೆ.

ನಾನಾಗದ ನಾನು ಕವನ ಸಂಕಲನ, ಸೋಲನ್ನ ಸೋಲಿಸಿ, ಮಿಸ್ ಕಾಲ್ ಎಂಬ ಕೃತಿಗಳನ್ನು ಸಹ ರಚಿಸಿದ್ದಾರೆ. ಪರಿಸರ ಪ್ರೇಮ ಹಾಗೂ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ತಮ್ಮ ಬಿಡುವಿನ ಸಮಯವನ್ನು ತೋಟದಲ್ಲೇ ಕಳೆಯುತ್ತಾರೆ.

ಮಾನವೀಯತೆಯ ವರದಿಗಾಗಿ ಭೂಪಾಳಂ ಚಂದ್ರಶೇಖರ್ ಪ್ರಶಸ್ತಿ, ಪ್ರತಿಧ್ವನಿ ಯಶಸ್ವಿ ಕಲಾ ಸಾಹಿತ್ಯ ಸೇರಿದಂತೆ ಹಲವು ಪ್ರಶಸ್ತಿಗಳು ಅವರದಾಗಿದೆ.

ಶಿವಮೊಗ್ಗದ ಈ ಇಬ್ಬರು ಹಿರಿಯ ಪತ್ರಕರ್ತರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿರುವುದು ಶಿವಮೊಗ್ಗ ಪರ್ತಕರ್ತ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಇಬ್ಬರು ಪತ್ರಕರ್ತರು ಈ ಹಿಂದಿನಿಂದಲೂ ಸಾಕಷ್ಟು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದು ಮುಂದೆಯೂ ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ಎಲ್ಲರ ಆಶಯವಾಗಿದೆ.

ಇದನ್ನು ಒದಿ : https://cnewstv.in/?p=5241

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*