Breaking News

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್ ಯಡಿಯೂರಪ್ಪ.

Cnewstv.in / 26.07.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪನವರು ಇಂದು ರಾಜೀನಾಮೆ ಘೋಷಿಸಿದ್ದಾರೆ. ಜುಲೈ 26, 2019 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಇಂದಿಗೆ ಎರಡು ವರ್ಷ ಅಧಿಕಾರವನ್ನು ಪೂರೈಸಿದ್ದಾರೆ.

ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸಾಧಾನಾ ಸಮಾವೇಶದಲ್ಲಿ ಭಾವುಕರಾಗಿ ರಾಜಿನಾಮೆ ಘೋಷಣೆ ಮಾಡಿದರು.

“ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ. ಖುಷಿಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದ ಯಾರಿಗೂ ಅಧಿಕಾರ ನಡೆಸಲು ಅವಕಾಶ ಇಲ್ಲ. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನ ಮೇಲಿನ ಪ್ರೀತಿ, ವಾತ್ಸಲ್ಯದಿಂದ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ನಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ಅವರು ವಿಧಾನಸಭೆಗೆ ಆಯ್ಕೆಯಾದಾಗ, ವಸಂತ ಬಂಗೇರ ಅವರು ಹಠಾತ್ ಪಕ್ಷಕ್ಕೆ ಕೈಕೊಟ್ಟು ಹೊರ ಹೋದರು. ಆ ವೇಳೆ ನಾನು ಎದೆಗುಂದಲಿಲ್ಲ. ಹಿಂದಿರುಗಿ ನೋಡದೆ, ಒಬ್ಬನೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಏಕಾಂಗಿ ಹೋರಾಟ ಮಾಡಿದೆ. ಆ ಮೂಲಕ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲನಾದೆ.
ಬಸವಕಲ್ಯಾಣದಿಂದ, ಶಿಕಾರಿಪುರದಿಂದ ಯಾತ್ರೆ ಮಾಡುವ ಮೂಲಕ ಪಕ್ಷ ಬಲ‌ಪಡಿಸುವ ಪ್ರಾಮಾಣಿಕ ಯತ್ನವನ್ನು ಮಾಡಿದ್ದೆವುಅಂದು ಶಾಸನಸಭೆಯಲ್ಲಿ ಯಾರೂ ಇರಲಿಲ್ಲ.‌ ನಾನೊಬ್ಬನೇ ವಿಧಾನಸೌಧ ಒಳಗಡೆ ಹೋರಾಟ ಮಾಡಬೇಕಾಗಿ ಬಂತುನಾನು ಎಂದೂ ಹಿಂದೆ ತಿರುಗಿ ನೋಡಿಲ್ಲ.‌ ನನ್ನ ಕರ್ತವ್ಯ ಜನ‌ಮೆಚ್ಚುವ ರೀತಿಯಲ್ಲಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆಮನೆಯಿಂದ ಕಚೇರಿಗೆ ಹೋಗುವಾಗ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.‌ ನಾನು ಬದುಕಿದ್ದರೆ ಈ ನಾಡಿನ‌ ಜನರಿಗೆ ಮುಡಿಪಗಿಟ್ಟಾಗುತ್ತೇನೆ ಎಂದು ನನ್ನ ಹೆಂಡತಿ‌ ಮಕ್ಕಳಿಗೆ ತಿಳಿಸಿದ್ದೆ. ಅದರಂತೆ ನಾನು ನಡೆದಿದ್ದೇನೆಅಂದು ಅಟಲ್ ಬಿಹಾರಿ ವಾಜಪೇಯಿ ಕೇಂದ್ರದಲ್ಲಿ ನೀವು ಸಚಿವನಾಗಬೇಕು ಎಂದಿದ್ದರು. ಆಗ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಾಗಿದೆ. ಯಾವುದೇ ಕಾರಣಕ್ಕೂ ನಾನು ದೆಹಲಿಗೆ ಬರಲ್ಲ ಎಂದಿದ್ದರು. ನನಗೆ ಪಕ್ಷ ಕಟ್ಟಲು ಬಿಡಿ ಎಂದಿದೆ. ಜಾತಿ, ಹಣ ಬಲದ ಹೊರತಾಗಿಯೂ ಜನ ನಮ್ಮ ಕೈ ಬಿಟ್ಟಿಲ್ಲ. ನಾವು ಇಲ್ಲಿರಲು ಕಾರಣ ಲಕ್ಷಾಂತರ ಕಾರ್ಯಕರ್ತರು75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಿದಿರಲು ಹೈಕಮಾಂಡ್ ತೀರ್ಮಾನ ಮಾಡಿತ್ತು. ಆದರೂ ಹೈ ಕಮಾಂಡ್ ನನ್ನ ಮೇಲೆ ಪ್ರೀತಿಯಿಂದ ನನಗೆ ಅವಕಾಶ ನೀಡಿದರು.ಮೋದಿ ಮತ್ತೆ ಗೆದ್ದು ಬರಬೇಕು. ಆಗ ಮಾತ್ರ ಭಾರತ ಪ್ರಪಂಚದಲ್ಲಿ ಪ್ರಬಲ ದೇಶವಾಗಿ ಬೆಳೆಯುತ್ತದೆ. ಇದು ನನ್ನ ಪ್ರಾರ್ಥನೆಮೋದಿ-ಶಾ ಜೋಡಿ ಮತ್ತೆ ಗೆದ್ದು ಬರಬೇಕು ಎಂದರು

ಶಿವಮೊಗ್ಗದಲ್ಲಿ ಕಾರು ಇಲ್ಲದ ಕಾಲದಲ್ಲಿ ಸೈಕಲ್‌ನಲ್ಲಿ ಹೋಗಿ ಓಡಾಟ ಮಾಡಿದ್ದೆವು. ಯಾರೂ ಇಲ್ಲದಿದ್ದಾಗ ಪಕ್ಷ ಕಟ್ಟಿದ್ದೇವೆಅನಿವಾರ್ಯತೆ ಕಾರಣದಿಂದ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡಿದೆವುರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲ‌ಪಡಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಿಸುವ ಗುರಿ ನನ್ನದು. ಎಲ್ಲಾ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ ಎದುರಿಸಿದೆಕೋವಿಡ್ ಮಹಾಮಾರಿ ಸವಾಲು ಎದುರಾಯಿತು. ನಾವೆಲ್ಲ ಶಕ್ತಿಮೀರಿ ಶ್ರಮವಹಿಸಿ ಕೋವಿಡ್ ನಿಯಂತ್ರಣ ಮಾಡಿದೆವು. ಹಂತ ಹಂತದಲ್ಲಿ ಅಗ್ನಿಪರೀಕ್ಷೆ ಎದುರಾಯಿತುದೇವರ ದಯೆಯಿಂದ ಎಲ್ಲರ ಸಹಕಾರದಿಂದ ಒಂದು ಬದಲಾವಣೆ ತರಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮುನ್ನಡೆಸುವ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ”

ಬಿ.ಎಸ್ ಯಡಿಯೂರಪ್ಪ.

ಇದನ್ನು ಒದಿ : https://cnewstv.in/?p=5238

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments