Cnewstv.in / 20.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೊರೊನಾ ಹಿನ್ನಲೆಯಲ್ಲಿ ಕಳೆದ ವರ್ಷ ಡಿಪ್ಲೋಮಾ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಮುಂದಿನ ಸೆಮಿಸ್ಟರ್ ಗೆ ಪ್ರವೇಶ ನೀಡಲಾಗಿತ್ತು. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿತ್ತು. ಅದರೆ ಈ ಬಾರಿ 1, 3 ಹಾಗೂ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ ಇದನ್ನು ಖಂಡಿಸಿ ಇದು ಶಿವಮೊಗ್ಗ ಜಿಲ್ಲಾ ಎನ್ಎಸ್ ಯು ಐ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಕೋವಿಡ್ ಲಸಿಗೆ ಪಡೆಯಲೇ ಬೇಕು. ಸರ್ಕಾರ ಈ ವರೆಗೂ ಕೇವಲ 18 ವರ್ಷದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್ ಲಸಿಕೆ ನೀಡುತ್ತಿದೆ. ಡಿಪ್ಲೊಮಾ ಪ್ರವೇಶ ಪಡೆದಿರುವ ಬಹುತೇಕರು ಎಸ್ಎಸ್ಎಲ್ಸಿ ತೇರ್ಗಡೆ ಹೊಂದಿ ಪ್ರವೇಶ ಪಡೆದಿರುತ್ತಾರೆ. 1ರಿಂದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು 16-18 ವರ್ಷ ವಯಸ್ಸಿನವರಾಗಿದ್ದು, ಇವರ್ಯಾರೂ ಕೋವಿಡ್ ಲಸಿಕೆ ಪಡೆದಿರುವುದಿಲ್ಲ. ಆದರೆ, ತಾಂತ್ರಿಕ ಶಿಕ್ಷಣ ಇಲಾಖೆ ಇದನ್ನೆಲ್ಲಾ ಪರಿಗಣಿಸದೇ ಎಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ.
ಕೂಡಲೇ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯು ಕಳೆದ ವರ್ಷದಂತೆ ಈ ವರ್ಷವೂ ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್ಗೆ ತೇರ್ಗಡೆಗೊಳಿಸಬೇಕು ಎಂದು ಜಿಲ್ಲಾ ಎನ್.ಎಸ್.ಯು.ಐ. ಈ ಮೂಲಕ ಆಗ್ರಹಿಸುತ್ತಿದೆ.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ಬಾಲಾಜಿ, ವಿಜಯ್ ,ರವಿ,ಭರತ ,ಕಿರಣ ,ಆಲ್ವಿನ್ , ಮುಬಶ್ಶಿರ್ ,ಸಂದೇಶ, ಸಂದೀಪ ಹಾಗೂ ವಿದ್ಯಾರ್ಥಿಗಳಾದ ಆದಿತ್ಯ ,ಭರತ್, ಬ್ರಿಜೇಶ್, ಅಂಕಿತಾ, ರಾಕೇಶ್, ಸುಮಂತ್, ನಿಖಿಲ್,ಪೂಜಾ, ಮಂಜುಳಾ, ಭೂಮಿಕಾ, ಶಾಲಿನಿ, ಸಾನಾ,ವಿಶ್ವ ,ಭುವನ್ ,ಶಿವು, ರಾಜೇಶ್ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಇದನ್ನು ಒದಿ : https://cnewstv.in/?p=5179
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments