Breaking News

ಅಕ್ಟೋಬರ್ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ

Cnewstv.in / 18.07.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನವದೆಹಲಿ : ಅಕ್ಟೋಬರ್ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುವಂತೆ ಶನಿವಾರ ಯುಜಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಎಲ್ಲಾ ಶಾಲಾ ಮಂಡಳಿಗಳು ಜುಲೈ 31ರ ಒಳಗೆ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಬೇಕು. ಅರ್ಹತಾ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾದರೆ ಹೊಸ ಶೈಕ್ಷಣಿಕ ವರ್ಷ ಅಕ್ಟೋಬರ್ 18 ರಿಂದ ಪ್ರಾರಂಭಿಸಲಾಗುವುದು

ಅಂತಿಮವಾದ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವಾಗಿದ್ದು ಆಗಸ್ಟ್ 31ರ ಒಳಗೆ ಮುಗಿಸುವಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡಲಾಗಿದೆ‌. ಅಂತಿಮ ವರ್ಷದ ಪರೀಕ್ಷೆಗಳನ್ನು ಆಫ್‌ಲೈನ್ ಅಥವಾ ಆನ್ ಲೈನ್ ಮೂಲಕ ಮಾಡಿ, ಆಗಸ್ಟ್ 31ರ ಒಳಗಾಗಿ ಮುಗಿಸಬೇಕು.

ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ವಿರುವುದಿಲ್ಲ ಅವರು ಪ್ರಸ್ತುತ ವರ್ಷದ ಆಂತರಿಕ ಮೌಲ್ಯಮಾಪನದ ಮೇರೆಗೆ ಶೇಕಡಾ 50ರಷ್ಟು ಹಾಗೂ ಹಿಂದಿನ ವರ್ಷದ ಸೆಮಿಸ್ಟರ್ನ ಸಾಧನೆಯ ಮೇರೆಗೆ ಉಳಿದ ಶೇಕಡಾ 50ರಷ್ಟು ಅಂಕ ನೀಡಬೇಕು.

ಇದನ್ನು ಒದಿ : https://cnewstv.in/?p=5170

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*