Breaking News

ಥಿಯೇಟರ್, ಓಟಿಟಿ ನಲ್ಲಿ ರಿಲೀಸ್ ಇಲ್ಲ ಸೈಡ್ ವಿಂಗ್ ಚಿತ್ರತಂಡದ ವಿನೂತನ ಪ್ರಯತ್ನ

Cnewstv.in / 06.06.2021 / Bangalore/ contact for information 9916660399

ಬೆಂಗಳೂರು : ಕೊರೊನಾ ಲಾಕ್ ಡೌನ್ ಅನೇಕ ಕ್ಷೇತ್ರಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ ಅಂತೆಯೇ ನಮ್ಮ ಚಿತ್ರರಂಗವೂ ಕೂಡ ಹೌದು, ಮೊದಲ ಅಲೆಯಿಂದಲೇ ಸಾಕಷ್ಟು ನಷ್ಟವನ್ನು ಅನುಭವಿಸಿದ ಚಿತ್ರರಂಗ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಎರಡನೇ ಅಲೆಯಿಂದಾಗಿ ಥಿಯೇಟರ್ ಬಂದ್ ಮಾಡಲಾಗಿದೆ.

ಇಂಥ ಸಂದರ್ಭದಲ್ಲಿ ಸೈಡ್ ವಿಂಗ್ ಚಿತ್ರತಂಡ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ಥಿಯೇಟರ್, ಓಟಿಟಿ ಎರಡನ್ನೂ ಹೊರತುಪಡಿಸಿ ನೇರವಾಗಿ ಮುಟ್ಟಿಸುವ ವಿಭಿನ್ನವಾದ ಪ್ರಯತ್ನಕ್ಕೆ ಮುಂದಾಗಿದೆ.

ಕನ್ನಡಕ್ಕಾಗಿ ಒಂದನ್ನು ಒತ್ತಿ, ದಯವಿಟ್ಟು ಗಮನಿಸಿ ಚಿತ್ರದ ಖ್ಯಾತಿಯ ಅವಿನಾಶ್ ಅವರು ನಟಿಸಿ ನಿರ್ದೇಶನ ಮಾಡಿರುವಂತಹ ಚಿತ್ರ ಸೈಡ್ ವಿಂಗ್. ರಂಗಭೂಮಿ ಹಾಗೂ ಸಿನಿಮಾ ಎರಡರ ನಡುವೆ ಸಿಲುಕಿ ತೊಳಲಾಟದಲ್ಲಿರುವ ಕಲಾವಿದನ ಸುತ್ತ ಹೆಣೆದಿರುವ ಸಿನಿಮಾವಾಗಿದೆ. ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗಬೇಕಿತ್ತು ಆದರೆ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಸೈಡ್ ವಿಂಗ್ ಚಿತ್ರನೋಡಲು ಇಚ್ಚಿಸುವವರು ಅವಿನಾಶ್ ಅವರ ಫೇಸ್ಬುಕ್ ಇನ್ಟಾ ಮೂಲಕ ಸಂಪರ್ಕ ಮಾಡಬಹುದು. ನಂತರ ಅವರು ಸಿನಿಮಾವನ್ನ ಹೇಗೆ, ಎಲ್ಲಿ ವೀಕ್ಷಿಸಬಹುದು ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ನಂತರ ಪಾಸ್ವರ್ಡ್ ಬದಲಿಸಲಾಗುತ್ತದೆ ಇದರಿಂದ ಪೈರಸಿ ಮಾಡುವುದನ್ನು ಸಹ ತಪ್ಪಿಸಬಹುದು. ಸೈಡ್ ವಿಂಗ್ ಚಿತ್ರತಂಡದ ಈ ಹೊಸ ಪ್ರಯತ್ನ ಯಶಸ್ವಿಯಾಗಲಿ.

https://www.facebook.com/ShatamarshanSAvinash/

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*