Cnewstv.in / Shivamogga / 26.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಯಾವುದೋ ಒಂದು ಪತ್ರಿಕೆಯಲ್ಲಿ, ಯಾವುದೋ ಒಂದು ಟಿವಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತೋರಿಸುತ್ತಾರೆ.ಅದು ಸತ್ಯ ಅಂತ ನಂಬುದಕ್ಕೆ ಆಗುವುದಿಲ್ಲ.ಯಡಿಯೂರಪ್ಪ ಅವರ ಅಧಿಕಾರವಧಿ ಮುಗಿದೆ ಹೋಯ್ತು, ಹೊಸ ಸಿಎಂ ಪ್ರತಿಜ್ಞಾ ವಿಧಿ ತೆಗೆದುಕೊಂಡು ಬಿಟ್ಟೆ ಬಿಟ್ಟರು ಅಂತಾ ತೋರಿಸಿದ್ರು.ಬಿಜೆಪಿ ಎಲ್ಲಾ ವಿಚಾರದ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ ಅವರು,ಪತ್ರಿಕೆ ಟಿವಿಯವರು ನಮ್ಮ ಪಕ್ಷದ ಮೇಲೆ ಡಾಮಿನೆಂಟ್ ಮಾಡೋಕೆ ಸಾಧ್ಯವಿಲ್ಲ ಎಂದರು.
ನಮ್ಮದು ಕಾಂಗ್ರೆಸ್ ಅಲ್ಲ ಇದು ಯಾರೋ ಬರುತ್ತಾರೆ, ಯಾರೋ ಹೋಗ್ತಾರೆ ಅನ್ನೋಕೆ.೧೭ ಜನ ಶಾಸಕರು ಹೋದ್ರು ಅವರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.ಎಲ್ಲರೂ ಬಿಜೆಪಿಗೆ ಬಂದ್ರು ಚುನಾವಣೆಯಲ್ಲಿ ಗೆದ್ದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಅಂಶವನ್ನು ಕೇಂದ್ರದ ನಾಯಕರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಯಾವುದೇ ಕಾರಣಕ್ಕು ಮುಖ್ಯಮಂತ್ರಿ ಬದಲಾವಣೆ ಇಲ್ಲ. ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತೇನೆ.ಅವಶ್ಯಕತೆ ಇದ್ದಾಗ ಶಾಸಕಾಂಗ ಸಭೆ ಕರೆಯುತ್ತಾರೆ.ವಿಧಾನ ಮಂಡಲದಲ್ಲಿ ಎಷ್ಟೋ ಸಮಿತಿ ಇದೆ. ಆ ಸಮಿತಿ ಸಭೆಗಳೇ ನಡೆಯುತ್ತಿಲ್ಲ.ಕ್ಯಾಬಿನೆಟ್ ನಡೆಸಲು ಸಹ ಹಿಂದೆ ಮುಂದೆ ನೋಡುತ್ತಿದ್ದೇವೆ.ಶಾಸಕಾಂಗ ಸಭೆ ಕರೆಯಬೇಕು ಅಂತಾ ಯಾರು ಕೇಳಿದ್ದಾರೆ. ಶಾಸಕಾಂಗ ಸಭೆ ಏಕೆ ಬೇಕು. ಎಲ್ಲಾ ಶಾಸಕರು ಅವರವರ ಕ್ಷೇತ್ರದಲ್ಲಿ ಕೋವಿಡ್ ದೂರ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ.ಶಾಸಕರ ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ.ಅವರವರ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ಶಾಸಕರಿಗೆ ಪುರುಸೋತ್ತು ಇಲ್ಲ.ಶಾಸಕಾಂಗ ಸಭೆ ಏನು ಅವಶ್ಯಕತೆ ಇದೆ.ಸುಮ್ಮನೆ ರಾಜಕಾರಣ ಬೆರೆಸುವ ಪ್ರಯತ್ನ ಮಾಡೋದು ಸೂಕ್ತವಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments