Cnewstv.in / Shivamogga / 24.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನಮ್ಮ ಆರೋಗ್ಯ – ನಮ್ಮ ಜಾಗೃತಿ, ಪ್ರತಿ ವಾರ್ಡ್ ನಲ್ಲಿ ಉಚಿತ ಆಕ್ಸಿಮೀಟರ್ ಅಳವಡಿಕೆ
ಶಿವಮೊಗ್ಗ : ಲಾಕ್ ಡೌನ್ ಸಂದರ್ಭದಲ್ಲಿ ಶಿವಮೊಗ್ಗ ನಗರದ ಪ್ರತಿ ವಾರ್ಡ್ ಗಳಲ್ಲಿ ತೆರೆದಿರುವ ದಿನಸಿ ಅಂಗಡಿ, ಹಾಲಿನ ಕೇಂದ್ರ, ತರಕಾರಿ ಮಾರುಕಟ್ಟೆ ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್.ಎಂ. ಟ್ರಸ್ಟ್ ಮೂಲಕ ಆಕ್ಸಿಮೀಟರ್ ಹಾಗೂ ಸ್ಯಾನಿಟೈಸರ್ ಗಳನ್ನು ಪ್ರತಿ ವಾರ್ಡಿಗೆ 5 ರಿಂದ 7 ರಂತೆ ಸುಮಾರು ಎರಡು ಲಕ್ಷ ರೂಪಾಯಿ ಬೆಲೆಯ ಆಕ್ಸಿಮೀಟರ್ ಹಾಗೂ ಸ್ಯಾನಿಟೈಸರ್ ಇಡಲಾಗುವುದು. ಅಗತ್ಯವಿರುವವರು ಹಾಗೂ ಹಿರಿಯರು, ಮಕ್ಕಳು ಹೀಗೆ ಪ್ರತಿಯೊಬ್ಬರೂ ಸಹ ಹತ್ತಿರದ ಸೂಚಿಸಿರುವ ಅಂಗಡಿಗಳಿಗೆ ತೆರಳಿ ಆಕ್ಸಿಜನ್ ಮಟ್ಟ ಹಾಗೂ ನಾಡಿ ಮಿಡಿತವನ್ನು ಉಚಿತವಾಗಿ ಪರಿಶೀಲಿಸಿಕೊಳ್ಳಬಹುದು.
ಇಂದು ವಿನೋಬನಗರದ ಪೊಲೀಸ್ ಚೌಕಿ ವೃತ್ತದಲ್ಲಿನ ಹಾಲಿನ ಅಂಗಡಿಯ ಮುಂದೆ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ಉದ್ಘಾಟಿಸಿದರು ಇದರ ಉಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕೆಂದು ತಿಳಿಸಿದರು.
ಪಲ್ಸ್ 92 ಕಿಂತ ಕಡಿಮೆಯಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಮುಂಜಾಗ್ರತ ಕ್ರಮವಾಗಿ ತೋರಿಸಿ ಕೊಳ್ಳಬೇಕೆಂದು ತಿಳಿಸಿದರು, ಇದರಿಂದ ಆತಂಕಕ್ಕೆ ಒಳಗಾಗದೆ ಆರೋಗ್ಯದ ಕಾಳಜಿಯೂ ಮಾಡಿಕೊಳ್ಳಬಹುದೆಂದು ತಿಳಿಸಿದರು ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು ಈ ರೀತಿಯ ಸಮಸ್ಯೆಗಳು ಕಂಡಲ್ಲಿ ತಪಾಸಣೆ ಕೂಡ ಒಳಗಾಗುವುದರ ಜೊತೆಗೆ ದೇಹದ ಆರೋಗ್ಯವೂ ಕೈಮೀರಿದ ಮೇಲೆ ಯಾರಿಂದಲೂ ಬದುಕಿಸಲು ಸಾಧ್ಯವಿಲ್ಲ ಅದಕ್ಕಾಗಿ ನಮಗೆ ಜಾಗೃತಿ ಮಾಡಿಕೊಳ್ಳುವುದು ಮುಖ್ಯವಾಗಿದೆ ಈ ಉಪಕರಣದಿಂದ ಶ್ವಾಸಕೋಶಕ್ಕೆ ಎಷ್ಟು ಪ್ರಮಾಣದ ಆಮ್ಲಜನಕದ ( ಆಕ್ಸಿಜನ್) ಪ್ರಮಾಣವು ಅಷ್ಟಾಗಿ ಹೋಗುತ್ತಿದೆ ಎಂಬುದು ತಿಳಿಯಬಹುದು ಇದು ಪ್ರತಿಯೊಬ್ಬರಿಗೂ ಉಪಯೋಗಕರ ಯಂತ್ರವಾಗಿದೆ ಪ್ರತಿಯೊಬ್ಬರು ಇದರ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ರವರು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರುಗಳಾದ ವಿಶ್ವನಾಥ್ ಕಾಶಿ ಹಾಗೂ ಬಿ ನಾಗರಾಜುರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ ರಂಗನಾಥ್, ರಂಗೇಗೌಡ, ಆಸಿಫ್, ಮಾಲ್ತೇಶ್, ಪವನ್ ಶರತ್, ಶಿವಕುಮಾರ್ ಹಾಗೂ ಅನೇಕರು ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments