Breaking News

ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಹಾಕುವ ವ್ಯವಸ್ಥೆಯಾಗಬೇಕು : ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್.ಕಿರಣ್

 

ಶಿವಮೊಗ್ಗ : ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿರಾರು ಜನರು ಪ್ರತಿದಿನ ಪ್ರಾಣ ಬಿಡುತ್ತಿದ್ದಾರೆ. ಈ ಮಧ್ಯೆ ವ್ಯಾಕ್ಸಿನ್ ಬಂದರೂ ಕೂಡ ಅದರ ಸರಿಯಾದ ಬಳಕೆಯಾಗುತ್ತಿಲ್ಲ. ಸರ್ಕಾರ ವ್ಯಾಕ್ಸಿನ್ ಕೊಡುವ ನೆಪದಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ವ್ಯಾಕ್ಸಿನ್ ಪಡೆಯಲು ಜನರು ಈಗಾಗಲೇ ಕಾಯುತ್ತಲೇ ಇದ್ದಾರೆ. ಆದರೂ ಕೂಡ ವ್ಯಾಕ್ಸಿನ್ ಸಿಗುತ್ತಿಲ್ಲ. ಕೊರೋನಾ ತಡೆಯಲು ವ್ಯಾಕ್ಸಿನ್ ತುಂಬಾ ಪರಿಣಾಮಕಾರಿಯಾಗಿದ್ದು, ಆದ್ದರಿಂದ ಸರ್ಕಾರ ಅಸಹಾಯಕರಿಗೆ, ಬಡವರಿಗೆ ಕೂಡಲೆ ಅವರ ಮನೆಗಳಿಗೆ ತೆರಳಿ ವ್ಯಾಕ್ಸಿನ್ ನೀಡಬೇಕು ಎಂದು ಅವರು ಆಗ್ರಹಿಸಿದರು.

ನಮ್ಮ ದೇಶದಲ್ಲಿ ಕೊರೋನಾದ ಎರಡನೇ ಅಲೆ ಅತಿರೇಕಕ್ಕೆ ಹಬ್ಬಿದ್ದು ಈ ಕಾಯಿಲೆಯಿಂದ ಸಾಕಷ್ಟು ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಹಾಗೆಯೇ ಎμÉ್ಟೂೀ ಜನ ಆಕ್ಸಿಜನ್ ಸಿಗದೆ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ . ಆದರೆ ಬಿಜೆಪಿ ನೇತೃತ್ವದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ನಿರ್ಲಕ್ಷತನ ತೋರುತ್ತಿದ್ದು ಇನ್ನೆಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಾರೋ ತಿಳಿಯದು ಎಂದು ಅವರು ಹೇಳಿದ್ದಾರೆ.

ಈ ಸರ್ಕಾರ ವ್ಯಾಕ್ಸಿನ್ ಕೊಡುವ ನೆಪದಲ್ಲಿ ಜನರಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ ಪ್ರತಿದಿನ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ದಿನಕ್ಕೆ 100 ರಷ್ಟು ವ್ಯಾಕ್ಸಿನ್ ಪೂರೈಕೆಯಾಗುತ್ತಿದ್ದು ಅದ್ದು ಒಂದು ದಿನ ಇದ್ದರೆ ಇನ್ನೊಂದು ದಿನ ಇರುವುದಿಲ್ಲ.ಇದರಿಂದ ದಿನೇ ದಿನೇ ವ್ಯಾಕ್ಸಿನ್ ಹಾಕಿಸಿಕೊಳ್ಳುವವರು ಜನಸಂಖ್ಯೆ ಹೆಚ್ಚುತ್ತಿದ್ದು ಇಲ್ಲಿ ಬೆಳಗಿನ ಜಾವದಿಂದಲೇ ದಿನಗಟ್ಟಲೆ ಲೈನ್ ಮುಖಾಂತರ ಟೋಕನ್ ಪಡೆದು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ದಿನಕ್ಕೆ 100 ವ್ಯಾಕ್ಸಿನ್ ಮಾತ್ರ ದೊರೆಯುತ್ತಿದ್ದು ಅದು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಪ್ರತಿದಿನ ಸರದಿಯಲ್ಲಿ 500ಕ್ಕೂ ಹೆಚ್ಚು ಜನ ನಿಂತಿರುತ್ತಾರೆ ಹಾಗೂ ಕರೋನ ಚಪಕ್ ಗೆ ಬರುವವರ ಸಂಖ್ಯೆಯೂ ಸಹ ಹೆಚ್ಚಾಗಿದ್ದು ಆರೋಗ್ಯ ಕೇಂದ್ರದಲ್ಲಿ ಕರೋನವನ್ನು ಗುಣ ಪಡಿಸುವುದರ ಬದಲಾಗಿ ಕರೋನವನ್ನು ಆಂಟಿ ಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಇದನ್ನು ಈ ಕೂಡಲೇ ಸಂಬಂಧಪಟ್ಟ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಕ್ಸಿನ್ ತಲುಪಿಸಿ ಅದರ ಮುಖಾಂತರ ಡಾಕ್ಟರ್ ಹಾಗೂ ನರ್ಸ್ ಅವರೇ ಪ್ರತಿಮನೆಗೂ ತಲುಪಿ ಮನೆಯಲ್ಲಿಯೇ ವ್ಯಾಕ್ಸಿನ್ ಹಾಕುವ ವ್ಯವಸ್ಥೆಯನ್ನು ಈ ಕೂಡಲೇ ಕಲ್ಪಿಸಬೇಕು ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಹಾಗೂ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಆರ್ .ಕಿರಣ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments