Cnewstv. In / Thirthalli /
*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399*
ಶಿವಮೊಗ್ಗ : ತೀವ್ರ ಜಿದ್ದಾಜಿದ್ದಿನ ಅಖಾಡವೆಂದೆ ಬಿಂಬಿತವಾಗಿದ್ದ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಳೆದ 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಬಿದ್ದಿದೆ . ಪಟ್ಟಣ ಪಂಚಾಯಿತಿಯ 15 ವಾರ್ಡ್ ಗಳ ಪೈಕಿ 9 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಸ್ಪಷ್ಟ ಬಹುಮತಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
15 ವಾರ್ಡ್‌ಗಳ ಪೈಕಿ ಬಿಜೆಪಿ 6 ವಾರ್ಡ್‌ಗಳಲ್ಲಿ ಗೆದ್ದಿದೆ. ನಿರಂತರವಾಗಿ ಕಳೆದ 25 ವರ್ಷದಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಬಿಜೆಪಿಯ ಹಿಡಿತದಲ್ಲಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.
ಪಟ್ಟಣ ಪಂಚಾಯತ್ ಅಧಿಕಾರವನ್ನು ಹಿಡಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ ಮತ್ತು ಶಾಸಕ ಅರಗ ಜ್ಞಾನೇಂದ್ರ ಅವರು ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ
ಕಾಂಗ್ರೆಸ್‌ನ ಮಾಜಿ ಶಾಸಕ ಸಚಿವರಾದ ಕಿಮ್ಮನೆ ರತ್ನಾಕರ್ ಜೋತೆಗೆ ಕೇಲವು ದಿನಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆರ್.ಎಂ ಮಂಜುನಾಥ್ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಭಲವಾಗಿ ಬೆಳೆಯಲು ಪಕ್ಷ ಸಂಘಟನೆಗಾಗಿ ದುಡಿಯುತ್ತಿರುವ ಜಿಲ್ಲಾಧ್ಯಕ್ಷ ಹೆಚ್‌ಎಸ್ ಸುಂದರೇಶ್ ಅವರುಗಳ ಒಗ್ಗಟ್ಟು ಭರ್ಜರಿ ಪ್ರಚಾರ ನಡೆಸಿ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿಯ ಬಿಜೆಪಿಯ ಭದ್ರ ಕೋಟೆ ಛಿದ್ರವಾಗಿದೆ.
*ಈ ಬಾರಿ ಗೆಲುವು ಸಾಧಿಸಿದವರು:*
ವಾರ್ಡ್ ನಂ. 1 ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ)
ವಾರ್ಡ್ ನಂ. 2 ಯತಿರಾಜ್ (ಬಿಜೆಪಿ),
ವಾರ್ಡ್ ನಂ. 3 ದತ್ತಣ್ಣ (ಕಾಂಗ್ರೆಸ್),
ವಾರ್ಡ್ ನಂ. 4 ನಮ್ರತ್(ಕಾಂಗ್ರೆಸ್),
ವಾರ್ಡ್ ನಂ. 5 ಸುಶಿಲಾ ಶೆಟ್ಟಿ (ಕಾಂಗ್ರೆಸ್),
ವಾರ್ಡ್ ನಂ. 6 ಶಬ್ನಮ್ (ಕಾಂಗ್ರೆಸ್),
ವಾರ್ಡ್ ನಂ.7 ಜೈಯು ಶೆಟ್ಟಿ (ಕಾಂಗ್ರೆಸ್),
ವಾರ್ಡ್ ನಂ. 8 ಜ್ಯೋತಿ ಗಣೇಶ (ಬಿಜೆಪಿ),
ವಾರ್ಡ್ ನಂ. 9 ಸಂದೇಶ ಜವಳಿ (ಬಿಜೆಪಿ),
ವಾರ್ಡ್ ನಂ.10 ಗಣಪತಿ (ಕಾಂಗ್ರೆಸ್),
ವಾರ್ಡ್ ನಂ. 11 ಜ್ಯೋತಿ ಮೋಹನ್(ಬಿಜೆಪಿ),
ವಾರ್ಡ್ ನಂ.12 ಬಾಬಿ ರವೀಶ (ಬಿಜೆಪಿ),
ವಾರ್ಡ್ ನಂ. 13 ಗೀತಾ ರಮೇಶ (ಕಾಂಗ್ರೆಸ್),
ವಾರ್ಡ್ ನಂ.14 ಮಂಜುಳಾ ನಾಗೇಂದ್ರ (ಕಾಂಗ್ರೆಸ್),
ವಾರ್ಡ್ ನಂ.15 ಅಸಾದಿ (ಕಾಂಗ್ರೆಸ್)
ಗೆಲುವಿನ ನಗೆ ಬಿರಿದ್ದಾರೆ
ಸುದ್ದಿ : ಸುಧೀರ್ ವಿಧಾತ.
Recent Comments