Breaking News

ಶಿವಮೊಗ್ಗ ಜಿಲ್ಲೆಯಲ್ಲಿ 450ರ ಗಡಿ ದಾಟಿದ ಕೊರೊನಾ

 

ಶಿವಮೊಗ್ಗ : ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ 457 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2152 ಸಕ್ರಿಯ ಪ್ರಕರಣಗಳಿವೆ.

2399 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 2502 ಜನರಿಗೆ ನೆಗೆಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 5 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗು ಜಿಲ್ಲೆಯಲ್ಲಿ 371 ಜನ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದಾರೆ.

26 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 295 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 258 ಜನ ಸೋಂಕಿನಿಂದ ದಾಖಲಾಗಿದ್ದಾರೆ. 1545 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ.

Leave a Reply

Your email address will not be published. Required fields are marked *

*