Breaking News

ಶಿವಮೊಗ್ಗಕ್ಕೆ ನೂತನ ಎಸ್ಪಿ ಆಗಿ ಲಕ್ಷ್ಮೀಪ್ರಸಾದ್ ನೇಮಕ.

 

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಯಾಗಿ ಯುವ ಅಧಿಕಾರಿ ಬಿ.ಎಂ‌. ಲಕ್ಷ್ಮೀ ಪ್ರಸಾದ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಪ್ರಸುತ್ತ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರನ್ನು ಬೆಂಗಳೂರಿನ ಪೂರ್ವ ಸಂಚಾರ ವಿಭಾಗದ ಡೆಪ್ಯೂಟಿ ಕಮಿಷನರ್ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ.

ಬಿ.ಎಂ‌. ಲಕ್ಷ್ಮೀ ಪ್ರಸಾದ್ ರವರ ಕಿರು ಪರಿಚಯ

2014 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮೀ ಪ್ರಸಾದ್ ಬಿ ಟೆಕ್ ಪದವೀದರರಾಗಿದ್ದಾರೆ. ಯುಪಿಎಸ್ ಸಿ ಯಲ್ಲಿ 2014 ರಲ್ಲಿ ನಡೆದ ಯುಪಿಎಸ್ ಸಿಯಲ್ಲಿ 151 ನೇ ರ್ಯಾಕ್ ಪಡೆದಿದ್ದರು. ಇವರು ವಿಜಯಪುರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಕಳದ ನಕ್ಸಲ್ ನಿಗ್ರಹದಳದ ಎಸ್ಪಿ ಆಗಿ ಕೆಲಸ ನಿರ್ವಹಿಸಿದ್ದಾರೆ. ನಂತರ ಬೆಂಗಳೂರಿನ ಇಂಟರ್ನಲ್ ಸೆಕ್ಯೂರಿಟಿಯ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ದಕ್ಷಿಣ ಕನ್ನಡದ ಎಸ್ಪಿ ಆಗಿದ್ದ ರವೀಕಾಂತೇ ಗೌಡರ ಜಾಗಕ್ಕೆ 2019 ಕ್ಕೆ ವರ್ಗಾವಣೆಗೊಂಡಿದ್ದರು. ಈಗ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

*