Breaking News

ಇಂದಿನಿಂದ ಸಂಜೆ 6ಗಂಟೆ ಬಳಿಕ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ 

 

ಶಿವಮೊಗ್ಗ : ಶಿವಮೊಗ್ಗದಲ್ಲಿ ಕರೋನಾ ನಿಯಂತ್ರಣದ ಕ್ರಮವಾಗಿ ಸಂಜೆ 6ಗಂಟೆ ಬಳಿಕ ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ವ್ಯಾಪಾರ ವಹಿವಾಟುಗಳನ್ನು ಇಂದಿನಿಂದ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು 6ಗಂಟೆಯ ಬಳಿಕ ರಸ್ತೆಗೆ ಇಳಿಯಬಾರದು.

ಕೆಲವು ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಒಂದೆಡೆ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಎಲ್ಲರ ಸಲಹೆಯ ಪ್ರಕಾರ ಶಿವಮೊಗ್ಗದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲೆಡೆ ರಾತ್ರಿ 8ರಿಂದ ಕಫ್ರ್ಯೂ ಜಾರಿಯಲ್ಲಿರಲಿದ್ದು, ಶಿವಮೊಗ್ಗದಲ್ಲಿ ಇದು ಸಂಜೆ 6ಗಂಟೆಯಿಂದ ಜಾರಿಯಾಗಲಿದೆ.

ಇನ್ನೂ ಯಾವುದೇ ಕಾರಣಕ್ಕೂ ಒತ್ತಾಯದ ಲಾಕ್‍ಡೌನ್ ಜಾರಿಗೊಳಿಸುವುದಿಲ್ಲ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು.

Leave a Reply

Your email address will not be published. Required fields are marked *

*