ಶಿವಮೊಗ್ಗ : ಈ ತಿಂಗಳ ಅಂತ್ಯದ ಒಳಗಾಗಿ ಬಿಎಸ್ IV ಮಾದರಿ ವಾಹನಗಳನ್ನು ನೋಂದಣಿ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಪ್ರಿಲ್ ಒಂದರಿಂದ ದೇಶದಲ್ಲಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ. ಅದರಂತೆ ಈಗಾಗಲೇ ಮಾರಾಟ ಮಾಡಿದ ಬಿಎಸ್ IV ಮಾದರಿಯ ಯಾವುದೇ ವಾಹನಗಳನ್ನು ಮಾರ್ಚ್ 31ರ ಒಳಗಾಗಿ ನೋಂದಣಿ ಮಾಡಿಸಬೇಕು ಹಾಗೂ ಈಗಾಗಲೇ ತಾತ್ಕಾಲಿಕ ನೋಂದಣಿ ಪತ್ರ ಪಡೆದಿರುವವರು ಸಹ ಈ ದಿನಾಂಕದ ಒಳಗಾಗಿ ನೋಂದಣಿ ಮಾಡಿಸಬೇಕು. ಎಪ್ರಿಲ್ ಒಂದರಿಂದ ಬಿಎಸ್ IV ಮಾದರಿಯ ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
C News TV Kannada News Online in cnewstv