ಶಿವಮೊಗ್ಗ: ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪ ಅವರು ಸಿಮ್ಸ್ ನಿರ್ದೇಶಕ ಡಾ. ಲೇಪಾಕ್ಷಿ ಅವರನ್ನು ನಿಂದಿಸಿರುವುದು ಸರಿ ಅಲ್ಲ ಎಂದು ಮಾಜಿ ಸಚಿವ ಕೆ.ಬಿ. ಪ್ರಸನ್ನ ಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈಶ್ವರಪ್ಪ ಅವರು ಡಾ. ಲೇಪಾಕ್ಷಿ ಅವರು ಇರುವ ವರೆಗೂ ಸಿಮ್ಸ್‌ಗೆ ಕಾಲಿಡುವುದಿಲ್ಲ ಎನ್ನುತ್ತಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ನಡೆದುಕೊಳ್ಳುವ ರೀತಿಯೇ? ಅವರು ಆಸ್ಪತ್ರೆಗೆ ಕಾಲಿಡದಿದ್ದರೆ ಅಲ್ಲಿಯ ಅವ್ಯವಸ್ಥೆಗಳನ್ನು ಸರಿ ಮಾಡುವವರು ಯಾರು? ರೋಗಿಗಳಿಗೆ ತೊಂದರೆ ಆದರೆ ಅದರ ಜವಾಬ್ದಾರಿ ಯಾರದು ಎಂದಿದ್ದಾರೆ.
ಅಧಿಕಾರಿಯೊಬ್ಬರನ್ನು ಬಹಿರಂಗವಾಗಿಯೇ ಎಲ್ಲರ ಎದುರಿಗೆ ನಿಂದಿಸಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೆ ಗೌರವ ಕೊಡುವ, ಅವರಿಂದ ಜನೋಪಯೋಗಿ ಕೆಲಸ ಮಾಡಿಸುವ ವಿಧಾನವೇ ಇದು ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾಗ ಫೋನ್ ಕರೆಯೊಂದಕ್ಕೆ ಪ್ರತಿಕ್ರಿಯಿಸಿ, ಡಾ. ಲೇಪಾಕ್ಷಿ ಅವರು ವರ್ಗಾವಣೆ ಆಗುವ ವರೆಗೂ ಸಿಮ್ಸ್‌ಗೆ ಕಾಲಿಡುವುದಿಲ್ಲ ಎಂದಿದ್ದರು.
- ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ ...
- ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ ...
- ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ ...
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ ...
- ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ. ...
- ದಸರಾ ಚಲನಚಿತ್ರೋತ್ಸವ… ...
- ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ...
- ನವರಾತ್ರಿ ಸಂಭ್ರಮ.. ...
- ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು ...
- ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ಕರುನಾಡ ಹಬ್ಬ ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್! ...
Recent Comments