ಚೆನೈ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಸುವಿನ ಆಪರೇಷನ್ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಹಸುವಿನ ಹೊಟ್ಟೆಯ ಆಪರೇಷನ್ ಮಾಡಿದ ವೈದ್ಯರಿಗೆ ಅಲ್ಲಿ ಸಿಕ್ಕಿದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್. ಮುನಿರತ್ನಂ ಎಂಬುವರಿಗೆ ಸೇರಿದ ಹಸು ಹೊಟ್ಟೆ ನೋವಿನಿಂದ ಬಳಲುತ್ತಿತ್ತು. ಜೊತೆಗೆ ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುನಿರತ್ನ ಚಿಕಿತ್ಸೆಗಾಗಿ ಹಸುವನ್ನು ತಮಿಳುನಾಡು ಪಶುವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕರೆತಂದಿದ್ದರು. ಈ ಹಸುವಿಗೆ ಡಾ.ವೇಲವನ್ ಆಪರೇಷನ್ ಮಾಡಿದಾಗ ಹಸುವಿನ ಹೊಟ್ಟೆಯ ಒಳಗೆ 52 ಕೆ.ಜಿ.ಪ್ಲಾಸ್ಟಿಕ್ ಸಿಕ್ಕಿದೆ. ಪ್ಲಾಸ್ಟಿಕ್ ಮಾತ್ರವಲ್ಲದೆ ಹಸುವಿನ ಹೃದಯದ ಬಳಿ ಗುಂಡುಸೂಜಿಗಳೂ ಪತ್ತೆಯಾಗಿವೆ. ಒಂದು ಗುಂಡುಸೂಜಿ ಹಸುವಿನ ಹೃದಯಕ್ಕೆ ಹುಚ್ಚಿದ್ದರೂ ಹಸು ಉಳಿಯುತ್ತಿರಲಿಲ್ಲ ಎಂದು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಪ್ರತಿಕ್ರಿಯಿಸಿದ್ದಾರೆ. ಪ್ಲಾಸ್ಟಿಗಳಿಂದ ಹಸುಗಳನ್ನು ಉಳಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.
.
https://youtu.be/cPkcUGF_u44
Recent Comments