ಹಣ್ಣುಗಳ ರಾಜ ಮಾವು ಹಾಗೂ ಹಲಸಿನ ಮೇಳವು ಶಿವಮೊಗ್ಗ ದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿಲಾಗಿದೆ.. ರಾಜ್ಯದ ನಾನಾ ಕಡೆಯಿಂದ ಮಾವು ಮತ್ತು ಹಲಸಿನ ವ್ಯಾಪಾರರಿಗಳು ವಿವಿಧ ತರೆವಾರಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕಣ್ಣುಹಾಯಿಸಿದಲ್ಲೆಲ್ಲಾ ಕಾಣುವ ರಸಪುರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ಅಲಾನ್ಸೊ, ಬಾದಾಮಿ, ಬಗನಪಲ್ಲಿ, ಲಾಂಗ್ರಾ, ಪ್ರಿನ್ಸಸ್, ವನರಾಜ, ರಾಜಗಿರಿ, ಸಿರಿ, ಆಫೂಸ್, ಕಲ್ಮಿ, ಬೆನಸಾನ್ ತಳಿಯ ಮಾವಿನ ಹಣ್ಣುಗಳು, ಸದಾನಂದ ಹಲಸು, ಬಿ.ಡಿ.ವಿ.ಟಿ. ಹಲಸು, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ಹೇಮಚಂದ್ರ, ಲಾಲ್ಬಾಗ್ ಮಧೂರ, ಮಾಂಕಾಳಿ, ಕೆಂಪು, ಹಲಸು, ವಟಗರ, ತಬೂಗರೆ ಪಿಂಕ್ , ಸಿಂಗಪುರ್, ತೂಬೂಗೆರೆ, ಸಿಂಧೂರ ತಳಿಯ ಹಲಸುಗಳು ಜನರ ಬಾಯಲ್ಲಿ ನೀರು ಬರಿಸುತ್ತಿವೆ.
ಶಿವಮೊಗ್ಗದಲ್ಲಿ ಈ ಬಾರಿ ಆಯೋಜಿಸಿರುವ ಮಾವು ಹಾಗೂ ಹಲಸು ಮೇಳ ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಮಾವು ಮತ್ತು ಹಲಸು ಮೇಳ’ಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಸಾಯನಿಕ ರಹಿತ ಮಾವು, ಹಲಸು ಸವಿಯಲು ಜನ ಮುಗಿಬಿದ್ದಿದ್ದಾರೆ. ನಾಳೆ ಸಂಜೆವರೆಗೂ ನಡೆಯಲಿರುವ ಈ ಮೇಳ ಜನಮನ್ನಣೆಗೆ ಪಾತ್ರವಾಗಿದ್ದಂತೂ ಸತ್ಯ..
Recent Comments