ನ್ಯಾಚುರಲ್ ಫಿಲ್ಟರ್ : ದೇಹಕ್ಕೂ ತಂಪು – ನೋ ಸೈಡ್ ಎಫೆಕ್ಟ್ .
ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವುದು ಮಣ್ಣಿನ ಮಡಿಕೆಯಲ್ಲಿ ನೀರು ಬಳಸುವುದು ಸಾಮಾನ್ಯವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಮಣ್ಣಿನ ಪಾತ್ರೆಯ ಬಳಕೆ ಕಡಿಮೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಗಾಜು ಬಳಕೆಗೆ ಬಂದಿವೆ.. ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿಡುವುದರಿಂದ ರಾಸಾಯನಿಕಗಳು ಬಿಡುಗಡೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವರು ನೀರನ್ನು ಫ್ರಿಡ್ಜ್ ನಲ್ಲಿಟ್ಟು ತಂಪು ಮಾಡಿ ಕುಡಿತಾರೆ ಅಂತಹವರಿಗೆ ಶೀತ ಗ್ಯಾರಂಟಿ..ಅದರೆ ನೈಸರ್ಗಿಕವಾಗಿರುವ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಮಣ್ಣಿನ ಮಡಕೆಯಲ್ಲಿ ತುಂಬಿದ ನೀರನ್ನು ಕುಡಿದರೆ ಅಸಿಡಿಟಿ, ಗ್ಯಾಸ್ ಸಂಬಂಧಿತ ಖಾಯಿಲೆ ಇರುವವರಿಗೆ ಉತ್ತಮ. ಮಣ್ಣಿನ ಮಡಕೆಯಲ್ಲಿ ಪ್ರಾಕೃತಿಕವಾಗಿ ದೊರಕುವ ಪೋಷಕಾಂಶಗಳು ಇರುವ ಕಾರಣಕ್ಕೆ ಈ ಪಾತ್ರೆಯನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು ಜೊತೆಗೆ ಆರೋಗ್ಯವಾಗಿದ್ದರು..
ಆಧುನಿಕತೆಗೆ ತಕ್ಕಂತೆ ವ್ಯಾಪಾರಿಗಳು ಸಹ ಆಕರ್ಷಕವಾಗಿ ಹಾಗೂ ಕಲಾತ್ಮಕವಾಗಿ ಮಣ್ಣಿನ ಮಡಿಕೆ ಬದಲಾಗಿ ಫಿಲ್ಟರ್ಗಳಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.. ಈಗಾಗಲೇ ಮಾರುಕಟ್ಟೆಯಲ್ಲಿ ಮಣ್ಣಿನ ಫಿಲ್ಟರ್ಗಳ ಕಾರುಬಾರು ಜೋರಾಗಿದೆ..ಈ ವರ್ಷ ಬಿಸಿಲಿನ ತಾಪ ಹೆಚ್ಚಿರುವದರಿಂದ ನ್ಯಾಚುರಲ್ ವಾಟರ್ ಫಿಲ್ಟರ್ ಗಳನ್ನು ಖರೀದಿ ಮಾಡುವವರ ಸಂಖ್ಯೆಯೂ ಸಹ ಹೆಚ್ಚಾಗಿದೆ..
Recent Comments