ಶಬರಿಮಲೆ ದೇವಾಲಯಕ್ಕೆ ಸ್ತ್ರೀಯರಿಗೆ ಪ್ರವೇಶದ ಹಕ್ಕನ್ನ ಕಲ್ಪಿಸಿದ ಸುಪ್ರೀಂಕೋರ್ಟ್ ನ ಆದೇಶದ ವಿರುದ್ದ ಇಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧೀಕಾರಿಗಳ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹೊರಟ ಶಬರಿಮಲೆ ಸಂಪ್ರದಾಯ ಉಳಿಸಿ ಪ್ರತಿಭಟನಾ ಮೆರವಣಿಗೆ ಗಾಂಧಿ ಬಜಾರ್, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ್ ರಸ್ತೆ, ಕೋರ್ಟ್ ಸರ್ಕಲ್ ಮೂಲಕ ಸಾಗಿ ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಆದೇಶಿಸಿದ ಸುಪ್ರೀಂ ಕೋರ್ಟ್ ನಿರ್ಣಯವು ಮರುಪರಿಶೀಲನೆ ಹಂತದಲ್ಲಿದ್ದು, ಈ ವಿಷಯದಲ್ಲಿ ಸವಿಸ್ತಾರವಾಗಿ ಮಾಹಿತಿ ಪಡೆಯಲು ಸುಪ್ರೀಂ ಕೋರ್ಟ್ ಸೆ.28 ರಂದು ಆಯೋಗ ರಚಿಸಲು ಆದೇಶಿಸಿದೆ. ಹಾಗಾಗಿ ಮಾನ್ಯ ರಾಜ್ಯಪಾರು ಮದ್ಯಪ್ರವೇಶಿಸಿ ಶಬರಿಮಲೆಯ ದೇವರ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶಿಸುವ ಹಕ್ಕನ್ನ ಕೇರಳದ ಸರ್ಕಾರ ಆತುರಕ್ಕೆ ಬಿದ್ದು ತಕ್ಷಣವೇ ಜಾರಿಗೊಳಿಸದಂತೆ ರಾಷ್ಟ್ರಪತಿಗಳ ಮೂಲಕ ತಡೆಹಿಡಿಯಬೇಕೆಂದು ಮನವಿಯಲ್ಲಿ ಸಂಘಟನೆ ಒತ್ತಾಯಿಸಿದೆ..
Recent Comments